ತುಮಕೂರು: ಆಂಧ್ರಪ್ರದೇಶದ(Andhra Pradesh) ಕಡೆಗೆ ಪ್ರವಾಸಕ್ಕೆ ತೆರಳಿದ್ದ ತುಮಕೂರಿನ(Tumakuru) ಮೂವರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಆಂಧ್ರದ ಕರ್ನೂಲ್ ಬಳಿ ನಡೆದಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ(Chikkanayakanahalli) ತಾಲೂಕಿನ ಕೆಂಕೆರೆ ನಿವಾಸಿಗಳಾದ ನವೀನ್(48), ಸಂತೋಷ್(35), ಲೋಕೇಶ್ (38) ಮೃತ ದುರ್ದೈವಿಗಳು. ಇದನ್ನೂ ಓದಿ: Ramanagara | 2 ಬೈಕ್‌ಗಳಿಗೆ ಗುದ್ದಿ ಹಳ್ಳಕ್ಕೆ ಬಿದ್ದ KSRTC ಬಸ್ – ಸಬ್ ಇನ್ಸ್‌ಪೆಕ್ಟರ್ ಸಾವು
ನವೀನ್, ಸಂತೋಷ್, ಲೋಕೇಶ್ ಸೇರಿ ಒಟ್ಟು 6 ಮಂದಿ ಆಂಧ್ರಪ್ರದೇಶದ ಕಡೆಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕಾರು ಕರ್ನೂಲ್ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ನವೀನ್, ಸಂತೋಷ್ ಹಾಗೂ ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವು
ಇನ್ನುಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ನೂಲ್ ಪೊಲೀಸ್ ಠಾಣೆಯಲ್ಲಿ(Kurnool Police Station) ಪ್ರಕರಣ ದಾಖಲಾಗಿದೆ.