ಬಿಗ್‍ಬಾಸ್ ಸೀಸನ್-12 (Bigg Boss 12 kannada) ದಿನದಿಂದ ದಿನಕ್ಕೆ ರಣರೋಚಕವಾಗ್ತಿದೆ. ಅದ್ರಲ್ಲೂ ವೀಕೆಂಡ್ ಶೋ ಕರುನಾಡಿನ ಪ್ರೇಕ್ಷಕರನ್ನ ಹಿಡಿದು ಕೂರಿಸುತ್ತೆ. ಕಿಚ್ಚನ ಪಂಚಾಯ್ತಿಗಾಗಿ ಕಾಯುವ ಪ್ರತಿಯೊಬ್ಬರೂ ಅಂದಾಜು ಮಾಡುತ್ತಿರುತ್ತಾರೆ, ಈ ವಾರ ಯಾರಿಗೆ ಕಿಚ್ಚ (Sudeep) ಖಡಕ್ ಕ್ಲಾಸ್ ತೆಗೆದುಕೊಳ್ತಾರೆ..? ಯಾರಿಗೆ ಚಪ್ಪಾಳೆ ಕೊಡ್ತಾರೆ..? ಯಾರದ್ದು ಸರಿ..ಯಾರದ್ದು ತಪ್ಪು..? ಅನ್ನೋದರ ಬಗ್ಗೆ ಯೋಚನೆ ಮಾಡ್ತಿರ್ತಾರೆ. ಆ ಘಳಿಗೆ ಈಗ ಬಂದೇ ಬಿಟ್ಟಿದೆ. ಗಿಲ್ಲಿ ಮಾಡಿದ ರೂಲ್ಸ್ ಬ್ರೇಕ್ ಕಾರಣದಿಂದ ಕ್ಯಾಪ್ಟನ್ ರೂಮ್‍ಗೆ ಬೀಗ ಬಿದ್ದಿದೆ.
ಈ ವಾರದ ಕಿಚ್ಚನ ಪಂಚಾಯ್ತಿ ಇಷ್ಟೂ ವಾರಗಳಲ್ಲಿ ಆದ ಪಂಚಾಯ್ತಿಗಿಂತ ಭಿನ್ನವಾಗಿದೆ. ಕಿಚ್ಚ ಗಿಲ್ಲಿಗೆ ಲೆಫ್ಟ್ ರೈಟ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ವಾರ ಕ್ಯಾಪ್ಟನ್ ಆದವರಿಗೂ ಜವಾಬ್ದಾರಿಯ ಪಾಠ ಮಾಡಿದ್ದಾರೆ ಕಿಚ್ಚ. ಬಿಗ್‍ಬಾಸ್ ಮನೆಯಲ್ಲಿ ಇದೇ ಮೊದಲಲ್ಲ, ಈ ರೀತಿ ಕ್ಯಾಪ್ಟನ್ ರೂಮ್‍ಗೆ ಬೀಗ ಬೀಳೋದು. ಹಿಂದಿನ ಸೀಸನ್‍ನಲ್ಲೂ ಒಂದು ಬಾರಿ ಕ್ಯಾಪ್ಟನ್ ರೂಮ್‍ಗೆ ಬೀಗ ಹಾಕಲಾಗಿತ್ತು. ಇದೀಗ ಗಿಲ್ಲಿಯ ಯಡವಟ್ಟಿನಿಂದ ಮತ್ತೆ ಬೀಗ ಬಿದ್ದಿದೆ.
ಕಳೆದ ವಾರ ಬಿಗ್‍ಬಾಸ್ ಮನೆಗೆ ಬಂದ ಅತಿಥಿಗಳ ಜೊತೆ ಗಿಲ್ಲಿ ನಡೆದುಕೊಂಡ ರೀತಿಯನ್ನ ಇಡೀ ಮನೆಯವರು ಹಾಗೂ ಕಿಚ್ಚ ಸುದೀಪ್ ಪಾಠ ಮಾಡಿದ್ದರು. ವೀಕೆಂಡ್‍ನಲ್ಲಿ ಕಿಚ್ಚನ ಮುಂದೆ ತಲೆ ತಗ್ಗಿಸಿ ಕುಳಿತ ಗಿಲ್ಲಿ ಮತ್ತದೇ ಆಟವನ್ನ ಮುಂದುವರೆಸಿದ್ದಾರೆ. ಈ ವಾರ ಕಿಚ್ಚ ಗಿಲ್ಲಿಗೆ ಮತ್ತೆ ಹೊಸ ಅಧ್ಯಾಯವನ್ನ ಆರಂಭಿಸಿದ್ದಾರೆ. ಗಿಲ್ಲಿಯ ಜೊತೆಗೆ ಮನೆಗೆ ಮಂದಿಗೂ ಶಿಕ್ಷೆ ಶತಸಿದ್ದ.

