ಕನ್ನಡದ ‘ಬಿಗ್ ಬಾಸ್ 11’ರ (Bigg Boss Kannada 11) ಆಟ ರೋಚಕವಾಗಿದೆ. ಕ್ಯಾಪ್ಟನ್ ಪಟ್ಟ ಏರಲು ಐಶ್ವರ್ಯಾ, ಭವ್ಯಾ (Bhavya Gowda) ನಡುವೆ ಪೈಪೋಟಿ ನಡೆದಿದೆ. ಬಿಗ್ ಬಾಸ್ ಕೊಟ್ಟ ಕತ್ತಲೆ ಬೆಳಕಿನ ಆಟದಲ್ಲಿ ಟ್ವಿಸ್ಟ್ ಕೊಡಲಾಗಿದೆ. ಸದ್ಯ ಕುತೂಹಲ ಮೂಡಿಸುವಂತಹ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:ಸ್ಪೆಷಲ್ ಸಾಂಗ್‌ಗೆ ನೇಹಾ ಶೆಟ್ಟಿ ಗ್ರೀನ್ ಸಿಗ್ನಲ್
ನಿನ್ನೆ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಕಡೆಯದಾಗಿ ಸಹ ಸ್ಪರ್ಧಿಗಳನ್ನು ಸೋಲಿಸಿ ಐಶ್ವರ್ಯಾ ಮತ್ತು ಭವ್ಯಾ ಉಳಿದುಕೊಂಡಿದ್ದರು. ಇದೀಗ ಇವರಿಬ್ಬರ ನಡುವೆ ಕ್ಯಾಪ್ಟನ್ಸಿಗಾಗಿ ಟಫ್ ಫೈಟ್ ನಡೆದಿದೆ. ಆ್ಯಕ್ಟಿವಿಟಿ ರೂಮ್‌ನಲ್ಲಿ ಕಾಲ ಕಾಲಕ್ಕೆ ಲೈಟ್ ಆನ್ ಮತ್ತು ಆಫ್ ಆಗುತ್ತದೆ. ಆಗ ಒಂದೊಂದೇ ಬಣ್ಣಗಳನ್ನು ಆಯಾ ಬಣ್ಣವನ್ನು ಸೂಚಿಸುವ ಪೆಡಾಸ್ಟಲ್‌ಗಳ ಮೇಲೆ ಇಡಬೇಕು. ಈ ಕತ್ತಲೆ ಬೆಳಕಿನ ಆಟದಲ್ಲಿ ಭವ್ಯಾ, ಐಶ್ವರ್ಯಾ (Aishwarya) ಇವರಲ್ಲಿ ಯಾರು ಗೆಲ್ತಾರೆ ಎಂಬುದು ಕ್ಯೂರಿಯಸ್ ಆಗಿದೆ.
View this post on Instagram
ಗೆದ್ದವರು ಮನೆಯ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಲಿದ್ದಾರೆ. ಇನ್ನೂ ಭವ್ಯಾ ಈಗಾಗಲೇ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಐಶ್ವರ್ಯಾ ಒಮ್ಮೆ ತ್ರಿವಿಕ್ರಮ್ ಜೊತೆ ಜೋಡಿ ಕ್ಯಾಪ್ಟನ್ ಆಗಿದ್ದರು. ಈ ಬಾರಿ ಸಿಂಗಲ್ ಕ್ಯಾಪ್ಟನ್ ಆಗಿ ದರ್ಬಾರ್ ಮಾಡಬೇಕು ಎಂಬುದು ಅಭಿಮಾನಿಗಳ ಆಶಯ. ಆದರೆ ಈ ಬಾರಿ ಭವ್ಯಾ ಕ್ಯಾಪ್ಟನ್ ಪಟ್ಟ ಏರಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಎಲ್ಲದ್ದಕ್ಕೂ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.