ಕಲಬುರಗಿ: ದೇಶದ ಪ್ರಸಿದ್ಧ ಕೇಂದ್ರಿಯ ವಿಶ್ವವಿದ್ಯಾಲಯವಾಗಿರುವ ಕಲಬುರಗಿಯ (Central University Kalaburagi) ಅಳಂದ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರಿಯ ವಿವಿಯು ದಿನೇದಿನೇ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿದೆ. ಇತ್ತೀಚಿಗೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿ ಮೇಲೆ ವಿಶ್ವವಿದ್ಯಾಲಯ ಕ್ಯಾಂಟಿನ್ ಓನರ್‌ನಿಂದ (Canteen Owner) ಲೈಂಗಿಕ ದೌರ್ಜನ್ಯ ಕೃತ್ಯ ನಡೆದಿದೆ ಎನ್ನುವ ಆರೋಪ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕೇಳಿಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿ ಇಮೇಲ್ ಮೂಲಕ ವಿವಿಯ ಆಡಳಿತ ಮಂಡಳಿಗೆ ದೂರು ನೀಡಿದ್ದಾಳೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧ – ಎರಡು ಮಕ್ಕಳಿಗೆ ವಿಷವುಣಿಸಿ ಪತಿ ಆತ್ಮಹತ್ಯೆ
ಎಂ.ಎ ಎಕಾನಾಮಿಕ್ಸ್ ವಿದ್ಯಾರ್ಥಿನಿ ಮೇಲೆ ಆಂಧ್ರಪ್ರದೇಶದ ಮೂಲದ ಕ್ಯಾಂಟಿನ್ ಮಾಲೀಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಯಾವುದೋ ವಿಚಾರದ ಬಗ್ಗೆ ಕ್ಯಾಂಟಿನ್ ಗುತ್ತಿಗೆ ಪಡೆದ ಅಂಕಲ್‌ನೊಂದಿಗೆ ಮಾತನಾಡಲು ವಿವಿ ಆವರಣದ ಕ್ಯಾಂಟಿನ್‌ಗೆ ಹೋಗಿದ್ದೆ. ಕ್ಯಾಂಟೀನ್ ಜನರಿಂದ ತುಂಬಿತ್ತು. ಆಗ ಅಂಕಲ್ ನನ್ನ ರೂಮ್ ಒಳಗೆ ಮಾತಾಡೋಣ ಬಾ ಎಂದು ಒಳಗಡೆ ಇರುವ ರೂಮ್‌ಗೆ ಕರೆದುಕೊಂಡು ಹೋಗಿ ನನ್ನ ಮುಖ ಹಿಡಿದು, ನನ್ನ ಕೆನ್ನೆಗೆ ಮುತ್ತಿಟ್ಟಿದ್ದಾನೆ. ಏಕೆ ಕಿಸ್ ಮಾಡಿದ್ದೀರಿ ಎಂದು ಪ್ರಶ್ನಿಸಿದರೆ ‘ನೀನು ನನ್ನ ಮಗಳ ಸಮಾನ’ ಎಂದು ಹೇಳಿ ಪದೇಪದೇ ಮುತ್ತಿಡಲು ಯತ್ನಿಸಿದ್ದಾರೆ’ ಎಂದು ವಿದ್ಯಾರ್ಥಿನಿ ಮೇಲ್ ಮೂಲಕ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ವರ್ತೂರ್ ಪ್ರಕಾಶ್ ಕಿಡ್ನ್ಯಾಪ್ ಕೇಸಲ್ಲಿ ಆರೋಪಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ಬಂಧನ
ವಿದ್ಯಾರ್ಥಿನಿ ಏಕೆ ಕಿಸ್ ಮಾಡಿದ್ದೀರಿ ಎನ್ನುವ ಪ್ರಶ್ನೆಗೆ ಕ್ಯಾಂಟಿನ್ ಮಾಲೀಕ ಉತ್ತರಿಸದೆ, (ಐ ವಿಲ್ ಕಾಲ್ ಯು ಬೇಟಾ) ನಾನು ನಿನ್ನನ್ನು ಮಗಳು ಎಂದು ಕರೆಯುತ್ತೇನೆ ಎಂದು ಹೇಳಿ ಮುತ್ತಿಟ್ಟ ವಿಚಾರವನ್ನು ಮರೆಮಾಚಲು ಯತ್ನಿಸಿದ್ದಾನೆ. ಆದರೆ, ಆತ ನನ್ನನ್ನು ಒಳ್ಳೆಯ ರೀತಿಯಲ್ಲಿ ಮುಟ್ಟದೆ ಕೆಟ್ಟ ರೀತಿಯಲ್ಲಿ ಮುಟ್ಟಿದಂತೆ ಭಾಸವಾಗಿದೆ ಎಂದು ವಿದ್ಯಾರ್ಥಿನಿ ಕ್ಯಾಂಟಿನ್ ಓನರ್ ವಿರುದ್ಧ ಆರೋಪಿಸಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗೆ ಕಳೆದ ಜುಲೈ 16ರಂದೇ ದೂರು ಸಲ್ಲಿಸಿದ್ದಾಳೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್
ಕಳೆದ ಏಪ್ರಿಲ್ 16ರಂದು ಘಟನೆ ನಡೆದರು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಬಳಿಕ ಎಚ್ಚೆತ್ತುಕೊಂಡ ಸಿಯುಕೆ ಆಡಳಿತ ಮಂಡಳಿ ಕೂಡಲೇ, ಕ್ಯಾಂಟಿನ್ ಗುತ್ತಿಗೆ ರದ್ದುಗೊಳಿಸಿ, ಆಂಧ್ರ ಮೂಲದ ಕ್ಯಾಂಟಿನ್ ಮಾಲಿಕನನ್ನು ಕ್ಯಾಂಪಸ್‌ನಿಂದ ಹೊರಹಾಕಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ