ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಭುಜದ ನೋವಿಗೆ ಶಸ್ತ್ರಚಿಕಿತ್ಸೆ ಪಡೆಯಲು ಲಂಡನ್‍ಗೆ ಹೋಗಿದ್ದರು. ಈಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ವೈದ್ಯರು ಅವರಿಗೆ ಸಲಹೆಯೊಂದನ್ನು ನೀಡಿದ್ದಾರೆ.
ಶಿವಣ್ಣ ಅವರು ವೈದ್ಯರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ಅಲ್ಲದೆ, ಡಾ. ಆಂಡ್ರ್ಯೂ ವ್ಯಾಲೇಕಾ ಅವರು ಲಂಡನ್‍ನಲ್ಲಿ ನನಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು. ಇವರು ಯಾವಾಗಲೂ ಪಾಸಿಟಿವ್ ಹಾಗೂ ನಗುತ್ತಿರುತ್ತಾರೆ. ಇನ್ಮುಂದೆ ನಾನು ಹೆಚ್ಚು ಶಕ್ತಿಯುತವಾಗಿ ಹಾಗೂ ಆರಾಮವಾಗಿ ಓಡಾಡಬಹುದು ಹಾಗೂ ಡ್ಯಾನ್ಸ್ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಬೆಂಗಳೂರಿಗೆ ಹಿಂದಿರುಗಿ ಶೂಟಿಂಗ್ ಪ್ರಾರಂಭಿಸಲು ಕಾಯಲು ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Dr.Andrew Wallaca was the doctor who operated me in #London.Positive and smiling always.
He says I can fight and dance more energetically and comfortably henceforth. Cant wait to get back to Bengaluru and start shooting. pic.twitter.com/Zm9lEFwjIi
— DrShivaRajkumar (@NimmaShivanna) July 18, 2019
ಶಿವಣ್ಣ ಅವರು ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದರು. ಕಳೆದ ಗುರುವಾರ ಅವರ ಶಸ್ತ್ರಚಿಕಿತ್ಸೆ ಯಶ್ವಸಿಯಾಗಿ ನಡೆದಿತ್ತು. ಶಿವಣ್ಣ ಅವರ ಜೊತೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಕೂಡ ಲಂಡನ್‍ಗೆ ತೆರಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಕೂಡ ಲಂಡನ್‍ಗೆ ತೆರಳಿ ಅವರ ಆರೋಗ್ಯವನ್ನು ನೋಡಿಕೊಂಡಿದ್ದಾರೆ.