ನವದೆಹಲಿ: ನಾಯಿ (Dog) ಕಚ್ಚುವ ಮನಸ್ಸಿನಲ್ಲಿದ್ದಾಗ ಅದರ ಮನಸ್ಸು ಓದಲು ಯಾರಿಗೂ ಸಾಧ್ಯವಿಲ್ಲ, ಪ್ರಿವೆನ್ಷನ್ ಈಸ್ ಬೆಟರ್ ದೆನ್ ಕ್ಯೂರ್ ಎಂಬ ಮಾತನ್ನ ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್ (Supreme Court) ರಸ್ತೆಗಳು, ಶಾಲೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ನಾಯಿಗಳು ಇರಬಾರದು ಎಂದು ಒತ್ತಿ ಹೇಳಿದೆ.
ಅಲೆಮಾರಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಯಿತು. ನ್ಯಾಯಮೂರ್ತಿಗಳಾದ ವಿಕ್ರಂ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಮೂರು ನ್ಯಾಯಮೂರ್ತಿಗಳ ಪೀಠ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಇತರೆಡೆ ಅಲೆಮಾರಿ ನಾಯಿಗಳಿಂದ ಉಂಟಾಗುವ ಸುರಕ್ಷತಾ ಸಮಸ್ಯೆಗಳ ಬಗ್ಗೆ ಚರ್ಚಿಸಿತು. ಇದನ್ನೂ ಓದಿ: ಸಂಕ್ರಾಂತಿ; ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲುಗಳ ಸಂಚಾರ
ರಸ್ತೆಗಳು ನಾಯಿಗಳಿಂದ ಸ್ವಚ್ಛ ಮತ್ತು ಮುಕ್ತವಾಗಿರಬೇಕು. ನಾಯಿಗಳು ಕಚ್ಚದಿದ್ದರೂ ಅಪಘಾತಗಳಿಗೆ ಕಾರಣವಾಗಬಹುದು. ರಸ್ತೆಗಳು, ಶಾಲೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ನಾಯಿಗಳ ಅಗತ್ಯವೇಕೆ? ಎಂದು ಪೀಠ ಪ್ರಶ್ನಿಸಿತು. 2018ರಲ್ಲಿ ನೀಡಿದ್ದ ಆದೇಶದಂತೆ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಸರ್ಕಾರ ಸರಿಯಾಗಿ ಕೆಲಸ ಮಾಡದಿದ್ದರೆ ಸಾಮಾನ್ಯ ಜನರು ಏಕೆ ಬಳಲಬೇಕು? ಎಂದು ಕೋರ್ಟ್ ಹೇಳಿತು. ಸದ್ಯ ಪ್ರಕರಣವನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: Bengaluru | ಅಪಾರ್ಟ್‌ಮೆಂಟ್‌ನ 16ನೇ ಫ್ಲೋರ್‌ನಿಂದ ಬಿದ್ದು ಟೆಕ್ಕಿ ಆತ್ಮಹತ್ಯೆ
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಆಕ್ರಮಣಕಾರಿ ನಾಯಿಗಳನ್ನು ಕೇಂದ್ರಕ್ಕೆ ಕರೆತಂದು ಅಗತ್ಯ ಚಿಕಿತ್ಸೆ ನೀಡಿ ಅದೇ ಪ್ರದೇಶಕ್ಕೆ ಬಿಡಬೇಕು ಎಂದು ವಾದಿಸಿದರು. ಇದಕ್ಕೆ ಕೋರ್ಟ್ ವ್ಯಂಗ್ಯವಾಡಿತು, ನಾಯಿಗಳಿಗೆ ಕೌನ್ಸೆಲಿಂಗ್ ನೀಡಿ ಕಚ್ಚದಂತೆ ಮಾಡುವುದು ಮಾತ್ರ ಬಾಕಿ ಇದೆ ಎಂದಿತು. ಕೇವಲ ಕಚ್ಚುವುದು ಮಾತ್ರವಲ್ಲ, ರಸ್ತೆಯಲ್ಲಿ ಓಡಾಡುವುದರಿಂದಲೂ ಅಪಘಾತಗಳಾಗುತ್ತವೆ ಎಂದು ಎಂದು ಪೀಠ ಹೇಳಿತು. ಇದನ್ನೂ ಓದಿ: ಗವಿಮಠ ಜಾತ್ರೆಯ ಪ್ರಸಾದದಲ್ಲಿ ವಿಶೇಷ – 2 ಲಕ್ಷಕ್ಕೂ ಹೆಚ್ಚು ಹಪ್ಪಳ ವಿತರಣೆ
ಕೇಂದ್ರ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಗೇಟೆಡ್ ಸೊಸೈಟಿಗಳಲ್ಲಿ ನಾಯಿಗಳನ್ನು ಅನುಮತಿಸುವ ಬಗ್ಗೆ ನಿವಾಸಿಗಳ ಸಂಘ ನಿರ್ಧಾರ ಮಾಡಲಿ ಎಂದರು. ನಾವೆಲ್ಲ ಪ್ರಾಣಿಪ್ರೇಮಿಗಳೇ, ಆದರೆ ಮಾನವಪ್ರೇಮಿಗಳೂ ಆಗಿದ್ದೇವೆ. ಒಬ್ಬರು ಹಾಲು ಕುಡಿಯಲು ಎಮ್ಮೆ ತರಬಹುದು, ಅದನ್ನು ಅನುಮತಿಸಬೇಕೇ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಇನ್ನೆಷ್ಟು ದಿನ ಇರ್ತೀವೋ ಗೊತ್ತಿಲ್ಲ, ನನ್ನ ಆಡಳಿತ ತೃಪ್ತಿಯಿದೆ: ಸಿದ್ದರಾಮಯ್ಯ ವಿದಾಯದ ಮಾತು?
ಕಳೆದ ನವೆಂಬರ್‌ನಲ್ಲಿ ಕೋರ್ಟ್ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಕ್ರೀಡಾ ಸಂಕೀರ್ಣಗಳು ಮತ್ತು ರೈಲು ನಿಲ್ದಾಣಗಳಿಂದ ಅಲೆಮಾರಿ ನಾಯಿಗಳನ್ನು ತೆರವುಗೊಳಿಸಿ ಆಶ್ರಯ ಕೇಂದ್ರಗಳಿಗೆ ಕಳುಹಿಸುವಂತೆ ಆದೇಶಿಸಿತ್ತು. ನಾಯಿ ಕಚ್ಚುವ ಘಟನೆಗಳು ಮರುಕಳಿಸುವುದು ಆಡಳಿತದ ಅಲಕ್ಷ್ಯ ಮತ್ತು ವ್ಯವಸ್ಥೆಯ ವೈಫಲ್ಯ ಎಂದು ಕೋರ್ಟ್ ಟೀಕಿಸಿತ್ತು. ಇದನ್ನೂ ಓದಿ: ಕ್ಯಾಬ್ ಬುಕ್ ಮಾಡಿ ಊರೆಲ್ಲಾ ಸುತ್ತಾಡಿದ ಮಹಿಳೆ – ಬಾಡಿಗೆ ಕೇಳಿದ್ರೆ ಲೈಂಗಿಕ ದೌರ್ಜನ್ಯ ಕೇಸ್ ಹಾಕ್ತೀನಿ ಅಂತಾ ಧಮ್ಕಿ


