ಮುಂಬೈ: 15 ವರ್ಷಗಳ ಕಾಲ ವೆಸ್ಟ್ಇಂಡೀಸ್ ತಂಡದಲ್ಲಿ ಕ್ರಿಕೆಟ್ ಆಡಿದ 34 ವರ್ಷದ ಕೀರನ್ ಪೊಲಾರ್ಡ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಕ್ರಿಕೆಟರ್‌ಗಳು ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಜಾಲತಾಣಗಳಲ್ಲಿ ಪೊಲಾರ್ಡ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ ವಿದಾಯದ ಶುಭಾಶಯ ಕೋರಿದ್ದಾರೆ.
Advertisement
ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ತಮ್ಮ ಟ್ವೀಟ್‌ನಲ್ಲಿ ಪೋಲಾರ್ಡ್ ಅವರ ಫೋಟೋ ಹಂಚಿಕೊಂಡಿದ್ದು, ಅವರನ್ನು `ಆಲ್‌ರೌಂಡರ್, ಚಾಲೆಂಜರ್, ಫೈಟರ್’ ಎಂದು ಕರೆದಿದ್ದಾರೆ. ಇದನ್ನೂ ಓದಿ: ಡೆಲ್ಲಿ ದರ್ಬಾರ್‌ಗೆ ಪಂಜಾಬ್ ಪಂಚರ್ – 10 ಓವರ್‌ಗಳಲ್ಲಿ ಟಾರ್ಗೆಟ್ ಉಡೀಸ್
Advertisement
ವೆಸ್ಟ್ಇಂಡೀಸ್ ತಂಡದ ಕ್ರಿಕೆಟಿಗ ಕ್ರಿಸ್‌ಗೇಲ್, ನನಗಿಂತಲೂ ಮುಂಚಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವುದು ನನಗೆ ನಂಬಲಾಗುತ್ತಿಲ್ಲ. ನಿಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಅಭಿನಂದನೆಗಳು. ನಿಮ್ಮ ಜೊತೆಯಲ್ಲಿ ಆಡಿದ ಆಟಗಳು ತುಂಬಾ ಚೆನ್ನಾಗಿವೆ ಎಂದು ನೆನಪಿಸಿಕೊಂಡಿದ್ದಾರೆ.
Advertisement
A fighter and a challenger with a terrific attitude on the field!
Congratulations Polly!! pic.twitter.com/DeRJY7aYZj
— Sachin Tendulkar (@sachin_rt) April 20, 2022
Advertisement
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಪೊಲಾರ್ಡ್ ಅವರು ಆಡುತ್ತಿದ್ದಾರೆ. T20 ಫ್ರಾಂಚೈಸಿ ಹಾಗೂ T-10 ಲೀಗ್ ಟೂರ್ನಿಗಳಲ್ಲೂ ತಮ್ಮ ಆಟ ಮುಂದುವರಿಸಲಿದ್ದಾರೆ. ಬಹಳಷ್ಟು ಯೋಚಿಸಿದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ
34 ವರ್ಷ ವಯಸ್ಸಿನ ಪೊಲಾರ್ಡ್ 2007ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕೊನೆಯ ಸರಣಿಯನ್ನು ಭಾರತ ತಂಡದ ವಿರುದ್ಧ ಆಡಿದರು. ಈವರೆಗೆ 123 ಏಕದಿನ ಪಂದ್ಯಗಳು ಹಾಗೂ ಹಾಗೂ 101 ಟಿ20 ಪಂದ್ಯಗಳಲ್ಲಿ ಮಿಂಚಿರುವ ಪೊಲಾರ್ಡ್ ಏಕದಿನ ಪಂದ್ಯಗಳಲ್ಲಿ 2706 (13 ಅರ್ಧ ಶತಕ, 3 ಶತಕ) ಹಾಗೂ T20 ಪಂದ್ಯಗಳಲ್ಲಿ 1569 ರನ್ (6 ಅರ್ಧಶತಕ) ಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ 119 ಗರಿಷ್ಠ ರನ್ ಗಳಿಸಿರುವ ಅವರು T20 ನಲ್ಲಿ 75 ಗರಿಷ್ಠ ರನ್‌ಗಳನ್ನು ಪೇರಿಸಿದ್ದಾರೆ.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವ ಅವರು, ಅನೇಕ ಪಂದ್ಯಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ದಡ ಸೇರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗರ ಸ್ಪೋಟಕ ಆಟಗಾರರ ಪಟ್ಟಿಯಲ್ಲೂ ಸ್ಥಾನ ಗಳಿಸಿದ್ದಾರೆ.