ಲಂಡನ್: ಪಂದ್ಯದಲ್ಲಿ ಜಯಗಳಿಸುವುದು ನಮ್ಮ ಗುರಿ. ಅದ್ದರಿಂದ ಇಲ್ಲಿ ಯಾವುದೇ ಆಟಗಾರರ ವೃತ್ತಿ ಜೀವನ ಮುಖ್ಯವಾಗುವುದಿಲ್ಲ ಎಂದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಕೊಹ್ಲಿ, ತಂಡದ ಆಟಗಾರರ ಸ್ಥಾನದ ಬದಲಾವಣೆ ಕುರಿತು ಕೇಳಿ ಬರುತ್ತಿರುವ ಟೀಕೆಗಳಿಗೆ ಖಡಕ್ ಮಾತಿನ ಮೂಲಕ ಉತ್ತರ ನೀಡಿದ್ದಾರೆ.
Proud moment for young Rishabh Pant as he becomes the 291st player to represent #TeamIndia in Test cricket.#ENGvIND pic.twitter.com/k63yG7IRrU
— BCCI (@BCCI) August 18, 2018
ತಂಡದಲ್ಲಿ ಯಾರು ಶಾಶ್ವತವಾಗಿ ಆಡಲು ಸಾಧ್ಯವಿಲ್ಲ. ಈ ಕುರಿತು ನಾನು ತಂಡದ ಯಾವುದೇ ಆಟಗಾರನ ಭವಿಷ್ಯ ಅಥವಾ ಫಾರ್ಮ್ ಕುರಿತು ಯೋಚನೆ ಮಾಡುತ್ತಿಲ್ಲ. ಆಟಗಾರರ ಸಮಯ ಬಂದಾಗ ಉತ್ತಮ ಪ್ರದರ್ಶನ ನೀಡಬೇಕು. ಅದ್ದರಿಂದ ಇಂತಹ ಆರೋಪಗಳನ್ನು ತಂಡದಿಂದ ಹೊರಗುಳಿದಿರುವವರು ಹೇಳುತ್ತಾರೆ ಎಂದು ತಿಳಿಸಿದರು.
ಈಗಾಗಲೇ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದು, ಇಂದು ನಾಟಿಂಗ್ ಹ್ಯಾಮ್ ನಲ್ಲಿ ನಡೆಯುವ 3ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಒತ್ತಡವನ್ನು ಎದುರಿಸುತ್ತಿದೆ. ನಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಗೆ ತಂಡದಿಂದ ಕೊಕ್ ನೀಡಲಾಗಿದ್ದು, ರಿಷಭ್ ಪಂತ್ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬೌಲಿಂಗ್ ನಲ್ಲಿ ಕುಲ್‍ದೀಪ್ ಯಾದವ್ ಸ್ಥಾನದಲ್ಲಿ ವೇಗಿ ಜಸ್‍ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಿದ್ದಾರೆ.
ಇದುವರೆಗೂ ಕೊಹ್ಲಿ ನಾಯಕತ್ವದಲ್ಲಿ 37 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಯಾವುದೇ ಟೆಸ್ಟ್ ಪಂದ್ಯದ ಬಳಿಕ ಮತ್ತೊಂದು ಪಂದ್ಯಕ್ಕೆ ತಂಡವನ್ನು ಮುಂದುವರಿಸಿಲ್ಲ. ಅದ್ದರಿಂದ ತಂಡದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂಬ ಟೀಕೆಗಳು ವಿಶ್ಲೇಷಕರಿಂದ ಕೇಳಿ ಬಂದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
England wins the toss and elects to bowl first.#ENGvIND pic.twitter.com/p85uODw4dq
— BCCI (@BCCI) August 18, 2018
Here's our Playing XI for the 3rd Test. pic.twitter.com/TbgCCrtakP
— BCCI (@BCCI) August 18, 2018