ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ (Primary Teachers ) ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಆದೇಶ ಪ್ರತಿ ನೀಡದ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಅಭ್ಯರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಪರೀಕ್ಷೆ ನಡೆದು ಒಂದು ವರ್ಷ ಕಳೆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಆದೇಶ ಮತ್ತು ಸ್ಥಳ ನಿಯೋಜನೆ ಆಗಿಲ್ಲ. ಪರೀಕ್ಷೆ ಬರೆದಿದ್ದ 70 ಸಾವಿರ ಅಭ್ಯರ್ಥಿಗಳಲ್ಲಿ 13,352 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆ ಪೈಕಿ ನೇಮಕಾತಿಯಲ್ಲಿ ಕಾನೂನು ಗೊಂದಲವಿದೆ ಎಂದು ಕೆಲವರು ಹೈಕೋರ್ಟ್ (High Court) ಮೆಟ್ಟಿಲೇರಿದ್ದಾರೆ. ಇದೇ ಕಾರಣದಿಂದಾಗಿ ಯಾವುದೇ ಕಾನೂನು ತೊಡಕಿಲ್ಲದೇ ಆಯ್ಕೆಯಾದ ಅಭ್ಯರ್ಥಿಗಳಿಗೂ ಸಮಸ್ಯೆಯಾಗುತ್ತಿದೆ. ಸರ್ಕಾರ ಕೂಡಲೇ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ಉತ್ತೀರ್ಣರಾದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
Advertisement
8 ತಿಂಗಳ ಗರ್ಭಿಣಿ ಯಾದಂತಹ ಕಾವ್ಯಾ ಅವರು ಧರಣಿಯಲ್ಲಿ ಸತತ ಮೂರನೆಯ ದಿನವೂ ಭಾಗವಹಸಿ ದಯವಿಟ್ಟು ಆದೇಶ ಪ್ರತಿ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: Teachers Recruitment: ಪದವೀಧರ ಪ್ರಾಥಮಿಕ ಶಿಕ್ಷಕರಾಗಿ 13,352 ಮಂದಿ ಆಯ್ಕೆ – ಅಂತಿಮ ಪಟ್ಟಿ ಪ್ರಕಟ
Advertisement
Advertisement
ಅಭ್ಯರ್ಥಿಗಳ ಸಮಸ್ಯೆ/ ಬೇಡಿಕೆ ಏನು?
ನಾವೆಲ್ಲರೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ನೇಮಕಾತಿ ಆಯ್ಕೆಪಟ್ಟಿಯಲ್ಲಿ ನಮ್ಮ ಹೆಸರುಗಳಿರುವ ಕಾರಣಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಮ್ಮನ್ನು ಕೆಲಸದಿಂದ ಕೈಬಿಟ್ಟಿವೆ.
Advertisement
ದಾಖಲಾತಿ ನೈಜತೆ ಪರಿಶೀಲನೆಗಾಗಿ ಮೂಲ ದಾಖಲಾತಿಗಳನ್ನು ಇಲಾಖೆಯ ವಶಕ್ಕೆ ಕೊಟ್ಟಿರುವುದರಿಂದ ಬೇರೆ ಕಡೆಗಳಲ್ಲಿ ಕೆಲಸಕ್ಕೆ ಸೇರಲು ಸಮಸ್ಯೆಯಾಗುತ್ತಿದೆ. ಈ ಕಡೆ ನೇಮಕಾತಿ ಆದೇಶ ಸಿಗದೇ ಆ ಕಡೆ ಇರುವ ಉದ್ಯೋಗವನ್ನು ಕಳೆದುಕೊಂಡ ನಮಗೆ ಜೀವನ ನಿರ್ವಹಣೆ ಮಾಡುವುದು ಬಹಳ ಕಷ್ಟವಾಗುತ್ತಿದೆ.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಸಂಖ್ಯೆಗಳಲ್ಲಿ ಶಿಕ್ಷಕರು ಇಲ್ಲದೆ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದ್ದು ಇಲಾಖೆ ಮತ್ತು ಸರ್ಕಾರದ ಉದ್ದೇಶ ಸಾಧನೆಯಾಗದಿರುವ ಕುಂಠಿತವಾಗುತ್ತಿದೆ.
ಹೊಸದಾಗಿ ಆಯ್ಕೆಯಾದ ಶಿಕ್ಷಕರು ಯಾವಾಗ ನೇಮಕಾತಿ ಆದೇಶ ಸಿಗುತ್ತದೆ ಮತ್ತು ಅವರು ಬೇರೆ ಬೇರೆ ಜಿಲ್ಲೆಗಳಲ್ಲಿ ಆಯ್ಕೆಯಾದ್ದರಿಂದ ತಮ್ಮ ಮಕ್ಕಳನ್ನ ಯಾವ ಊರಿನ ಶಾಲೆಗೆ ದಾಖಲು ಮಾಡಿಸಬೇಕು? ಯಾವ ಸ್ಥಳದಲ್ಲಿ ವಾಸವಾಗಬೇಕು ಎಂಬುದರ ಬಗ್ಗೆ ಗೊಂದಲವಿದೆ.
Web Stories