ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಗೆಜೆಟೆಡ್ ಪ್ರೊಬೇಷನರಿ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆಯು ಇಂದು (ಭಾನುವಾರ) ರಾಜ್ಯಾದ್ಯಂತ ಬಿಗಿ ಭದ್ರತೆಯ ನಡುವೆ ಆರಂಭವಾಗಿದೆ. ಈ ವೇಳೆ ಕಲಬುರಗಿಯಲ್ಲಿ ಯುವತಿಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ಬರುವ ಗಡಿಬಿಡಿಯಲ್ಲಿ ಹಳೆಯ ಹಾಲ್ಟಿಕೆಟ್ ತಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಯುವತಿ ಹಳೆಯ ಹಾಲ್ಟಿಕೆಟ್ ತಂದಿದ್ದರಿಂದ ಪರೀಕ್ಷಾ ಕೇಂದ್ರದ ಬಳಿ ಪರದಾಡಿದ್ದಾಳೆ. ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ ಬರೆದಿದ್ದ ಯುವತಿ ಅದೇ ಪರೀಕ್ಷಾ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಬಂದು ಎಡವಟ್ಟು ಮಾಡಿಕೊಂಡಿದ್ದಾರೆ. ನಂತರ ಪೊಲೀಸರ ಮುಂದೆ ಒಳಗೆ ಬಿಡುವಂತೆ ಗೋಗರೆದಿದ್ದಾಳೆ. ಆದರೆ, ನಿಯಮ ಉಲ್ಲಂಘಿಸಲಾಗಲ್ಲ ಎಂದು ಪೊಲೀಸರು ಆಕೆಯನ್ನು ಒಳಗೆ ಬರಲು ಅವಕಾಶ ನೀಡಿಲ್ಲ. ಅವಕಾಶ ಸಿಗದೆ ನಿರಾಸೆಯಿಂದ ಯುವತಿ ಮನೆಗೆ ವಾಪಸ್ ಆಗಿದ್ದಾರೆ.ಇದನ್ನೂ ಓದಿ: ಮಿಯಾಮಿ ಏರ್ಪೋರ್ಟ್ನಲ್ಲಿ 2 ವಿಮಾನಗಳು ಡಿಕ್ಕಿ
ಕಲಬುರಗಿಯಲ್ಲಿ ತಡವಾಗಿ ಬಂದ ಅಭ್ಯರ್ಥಿ ಕಣ್ಣೀರು
ಕಲಬುರಗಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಬೀದರ್ನಿಂದ ಅಭ್ಯರ್ಥಿಯೊಬ್ಬರು ತಡವಾಗಿ ಆಗಮಿಸಿದ್ದರಿಂದ ಪ್ರವೇಶ ನಿರಾಕರಿಸಲಾಯಿತು. ಗೇಟ್ ಬಳಿ ಅಧಿಕಾರಿಗಳ ಮುಂದೆ ಗೋಗರೆದು ಕಣ್ಣೀರಿಟ್ಟ ಅಭ್ಯರ್ಥಿಯ ಪರಿಸ್ಥಿತಿಯನ್ನು ಕಂಡು, ಅಂತಿಮವಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.ಇದನ್ನೂ ಓದಿ: ಟೇಕಾಫ್ ಬಳಿಕ ಮಡಚಿಕೊಳ್ಳದ ಲ್ಯಾಂಡಿಂಗ್ ಗೇರ್ – ಪುಣೆಯಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
