ಸಿಡ್ನಿ: ಆಸ್ಟ್ರೇಲಿಯಾದ ಕ್ಯಾನ್‍ಬೆರಾ ವಿಮಾನ ನಿಲ್ದಾಣದ ಚೆಕ್ ಇನ್ ಪ್ರದೇಶದಲ್ಲಿ ಬಂದೂಕುಧಾರಿಯೊಬ್ಬ ಐದು ಬಾರಿ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆತನ ಬಳಿ ಇದ್ದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯದ ವೀಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವೇಳೆ ಒಬ್ಬನೇ ಘಟನೆಗೆ ಕಾರಣ ಎನ್ನುವುದರ ಬಗ್ಗೆ ಸುಳಿವು ದೊರೆತಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಹಾನಿ ಆಗಿಲ್ಲ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಹಿಂದೆ ಆಪ್ತ ಸ್ನೇಹಿತರೂ ಸೇರಿದ್ದಾರೆ: ತಂದೆ ಆರೋಪ
Advertisement
The airport has resumed normal operations. Please check your travel plans directly with your airline if you are travelling today.
— Canberra Airport (@CanberraAirport) August 14, 2022
Advertisement
ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾನ್‍ಬೆರಾ ವಿಮಾನ ನಿಲ್ದಾಣದ ಟರ್ಮಿನಲ್‍ನಿಂದ ತೆರವು ಮಾಡಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿತ್ತು. ಇನ್ನೂ ಕೆಲವು ವಿಮಾನಗಳು ಪ್ರಯಾಣಿಕರೊಂದಿಗೆ ರನ್‍ವೇಯಲ್ಲಿ ಸ್ಥಗಿತಗೊಂಡಿದ್ದವು. ಕೆಲವು ಗಂಟೆಗಳ ನಂತರ ವಿಮಾನ ಕಾರ್ಯಾಚರಣೆಗಳು ಪುನಾರಂಭಗೊಂಡವು. ಇದನ್ನೂ ಓದಿ: ಕೊನೆ ಉಸಿರಿರೋವರೆಗೂ ಮಂಡ್ಯದ ಸೊಸೆಯಾಗಿರುವೆ: ಸುಮಲತಾ ಅಂಬರೀಶ್