ಬೆಳಗಾವಿ: ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿ ಪಟ್ಟಣದಲ್ಲಿ ನಡೆದಿದೆ.
ನೀರಾವರಿ ಇಲಾಖೆಯ ಅಧಿಕಾರಿಗಳು ಹಾರೋಗೇರಿ ಪಟ್ಟಣದ ಕೆರೆ ತುಂಬಿಸಲು, ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ನೀರು ಹಾಯಿಸಿದ್ದಾರೆ. ಏಕಾಏಕಿ ನೀರು ಹರಿಸಿದ್ದರಿಂದ ಹಾರೋಗೇರಿ ಪಟ್ಟಣದ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳು ತಗ್ಗು ಪ್ರದೇಶದಲ್ಲಿಂದರಿಂದ ನೀರು ತುಂಬಿಕೊಂಡಿದ್ದು, ಮನೆಯಿಂದ ನೀರು ತೆಗೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ನೀರಿನಿಂದಾಗಿ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ.
Advertisement
ಪುರಸಭೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಯನ್ನು ಸ್ವಚ್ಛಗೊಳಿಸದೇ ನೀರು ಹರಿಸಿದ್ದರಿಂದ ಕಾಲುವೆ ತುಂಬಿ ಹತ್ತಿರದ ಮನೆಗಳಿಗೆ ನುಗ್ಗಿದೆ. ಯಾವುದೇ ಮಾಹಿತಿ ನೀಡದೆ ಏಕಾಏಕಿ ನೀರು ಬಿಟ್ಟಿದ್ದರ ಪರಿಣಾಮ ನೀರು ನುಗ್ಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ