ಒಟ್ಟಾವಾ: ಕೆನಡಾದ (Canada) ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ತಮ್ಮ ಪತ್ನಿ ಸೋಫಿಯೊಂದಿಗೆ ವಿಚ್ಛೇದನ (Divorce) ಪಡೆದುಕೊಂಡಿರುವುದಾಗಿ ತಮ್ಮ ಕಚೇರಿ ಬುಧವಾರ ತಿಳಿಸಿದೆ. ಈ ಮೂಲಕ ಕೆನಡಾ ಪ್ರಧಾನಿ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಜಸ್ಟಿನ್ ಟ್ರುಡೊ (51) ಹಾಗೂ ಸೋಫಿ (48) 2005ರ ಮೇ ಕೊನೆಯಲ್ಲಿ ವಿವಾಹವಾದರು. ಪ್ರಧಾನಿ ಟ್ರುಡೊ ಹಾಗೂ ಅವರ ಪತ್ನಿ ಸೋಫಿ ಪ್ರತ್ಯೇಕಗೊಳ್ಳುತ್ತಿರುವ ನಿರ್ಧಾರಕ್ಕೆ ಸಂಬಂಧಿಸಿಂತೆ ಎಲ್ಲಾ ಕಾನೂನು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಚೇರಿ ತಿಳಿಸಿದೆ. ಇದನ್ನೂ ಓದಿ: ಎಸ್‍ಇಪಿ ಜಾರಿಗೆ ಸರ್ಕಾರದ ಸಿದ್ಧತೆ – ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ
ದಂಪತಿಗೆ ಮೂವರು ಮಕ್ಕಳಿದ್ದಾರೆ. ಈಗ ಅವರು ನಿಕಟ ಕುಟುಂಬವಾಗಿ ಉಳಿಯಲಿದ್ದಾರೆ. ಪ್ರಧಾನಿ ಹಾಗೂ ಸೋಫಿ ತಮ್ಮ ಮಕ್ಕಳನ್ನು ಸುರಕ್ಷಿತ, ಪ್ರೀತಿ, ಸಹಯೋಗದ ವಾತಾವರಣದಲ್ಲಿ ಬೆಳೆಸುವತ್ತ ಗಮನಹರಿಸಲಿದ್ದಾರೆ. ಮುಂದಿನ ವಾರದಿಂದ ಕುಟುಂಬ ಜೊತೆಯಲ್ಲಿ ರಜೆಯನ್ನು ಕಳೆಯಲಿದೆ ಎಂದು ಕಚೇರಿ ಉಲ್ಲೇಖಿಸಿದೆ. ಇದನ್ನೂ ಓದಿ: 5 ಡಜನ್‍ಗೂ ಹೆಚ್ಚು ಇನ್ಸ್‌ಪೆಕ್ಟರ್ ವರ್ಗಾವಣೆಗೆ ತಡೆ – ಆದೇಶಕ್ಕೆ ದಿಢೀರ್ ತಡೆ ಹಿಡಿದಿದ್ದು ಯಾಕೆ?
Web Stories