ತುಮಕೂರು: ಕೆನಡಾ ಸಂಸದ ಚಂದ್ರ ಆರ್ಯ ಅವರು ತಮ್ಮ ಹುಟ್ಟೂರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಗಜ್ಜಿಗರಹಳ್ಳಿ ನಮ್ಮ ತಾತ ಅವರ ಊರಾಗಿದೆ. ಇಲ್ಲಿಗೆ ಬರುವುದು ಎಂದರೆ ನಮಗೆ ತುಂಬಾ ಸಂತೋಷ. ಕಳೆದ ನಾಲ್ಕೈದು ವರ್ಷದಲ್ಲಿ ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ. ಈ ಗ್ರಾಮದಲ್ಲಿ ರಸ್ತೆ ಆಗಬೇಕು. ಮೊದಲು ದೇವಸ್ಥಾನ ಇರಲಿಲ್ಲ. ಈಗ ಗ್ರಾಮದವರೇ ಕಟ್ಟಿಸಿದ್ದಾರೆ ಎಂದರು.
Advertisement
Advertisement
ನಂತರ ಗಜ್ಜಿಗರಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಚಂದ್ರ ಆರ್ಯ ಅವರು, ಕೆಲಕಾಲ ಗ್ರಾಮದ ಹಳೆ ಸ್ನೇಹಿತರೊಂದಿಗೆ ಕೂತು ಚರ್ಚೆ ನಡೆಸಿದರು. ಪತ್ನಿಯೊಂದಿಗೆ ಭೇಟಿ ಕೊಟ್ಟ ಚಂದ್ರ ಆರ್ಯ ಅವರನ್ನು ಗ್ರಾಮಸ್ಥರು ಹಾರ, ಪೇಟ ಹಾಕಿ ಸನ್ಮಾನಿಸಿದರು. ಇದನ್ನೂ ಓದಿ: ಎಐಡಿಎಂಕೆ ಕಾರ್ಯಕರ್ತರ ನಡುವೆ ಮಾರಾಮಾರಿ- ಕಚೇರಿಯ ಬಾಗಿಲು ಒಡೆದ ಬೆಂಬಲಿಗರು
Advertisement
Advertisement
ಇತ್ತೀಚೆಗೆ ಕೆನಡಾ ಸಂಸತ್ತಿನಲ್ಲಿ ಮಾತೃಭಾಷೆ ಕನ್ನಡವನ್ನು ಮಾತನಾಡುವ ಮೂಲಕ ಚಂದ್ರ ಆರ್ಯ ಅವರು ತಮಗೆ ಕನ್ನಡದ ಮೇಲೆ ಇರುವ ಪ್ರೀತಿ, ಗೌರವ, ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಈ ಮೂಲಕ ಕನ್ನಡ ಕಂಪನ್ನು ಕೆನಡಾ ಸಂಸತ್ತಿವರಿಗೂ ಪಸರಿಸಿದ್ದರು. ಇದನ್ನೂ ಓದಿ: ಗೋವಾದಲ್ಲೂ ಆಪರೇಷನ್‍ಗೆ ಮುಂದಾಗಿದ್ಯಾ ಬಿಜೆಪಿ..? – ಕಾಂಗ್ರೆಸ್ ಶಾಸಕರಿಗೆ 40 ಕೋಟಿ ಆಫರ್