ಜಿಮ್‍ನಲ್ಲಿ ಕಠಿಣ ವರ್ಕೌಟ್- 22 ಕೆಜಿ ತೂಕ ಇಳಿಸಿದ 73ರ ಅಜ್ಜಿ

Public TV
1 Min Read
73 Year old Lady

ಒಟ್ಟಾವಾ: ಜಿಮ್‍ನಲ್ಲಿ ಕಠಿಣ ವರ್ಕೌಟ್ ಮಾಡುವ ಮೂಲಕ 73 ವರ್ಷದ ಅಜ್ಜಿಯೊಬ್ಬರು 22 ಕೆಜಿ ತೂಕ ಇಳಿಸಿದ್ದಾರೆ.

ಕೆನಡಾ ರಾಜಧಾನಿ ಒಟ್ಟಾವಾದ 73 ವರ್ಷದ ಜಾನ್ ಮೆಕೆಡೊನಾಲ್ಡ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಇನ್‍ಸ್ಟಾಗ್ರಾಮ್ ಖಾತೆ ಟ್ರೈನ್ ವಿಥ್‍ಜಾನ್ ಅನ್ನು 5 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

https://www.instagram.com/p/B6RWQdwjTJS/?utm_source=ig_embed

ಜಾನ್ ಮೆಕೆಡೊನಾಲ್ಡ್ ಅವರು ಮೂರು ವರ್ಷಗಳ ಹಿಂದೆ ವಯೋಸಹಜ ಕಾಯಿಲೆ ಸೇರಿದಂತೆ ಅಧಿಕ ತೂಕ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹೀಗಾಗಿ 5.3 ಅಡಿ ಎತ್ತರ, 90 ಕೆಜಿ ತೂಕದ ಜಾನ್ ಜಿಮ್‍ಗೆ ಹೋಗಲು ಪ್ರಾರಂಭಿಸಿದರು. ಕಠಿಣ ವರ್ಕೌಟ್ ಮಾಡುವ ಮೂಲಕ 22 ಕೆಜಿಗಿಂತ ಹೆಚ್ಚು ತೂಕವನ್ನು ಕಡಿಮೆ ಮಾಡಿದ್ದಾರೆ. ಜೊತೆಗೆ ಜಾನ್ ಅವರ ದೇಹದ ಸ್ನಾಯುಗಳು ಬಲವಾಗಿವೆ.

ಜಾನ್ ಅವರು ದೈಹಿಕವಾಗಿ ಭಾರೀ ಬದಲಾಗಿದ್ದಾರೆ. ಅವರು ಆಹಾರ ಪದ್ಧತಿ ಬದಲಾವಣೆ ತಂದು, ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿದರು. ಈ ಮೂಲಕ ಅವರು ವೇಟ್ ಲಿಫ್ಟಿಂಗ್ ಹಾಗೂ ಬಾಡಿಬಿಲ್ಡರ್ ಆಗಿದ್ದಾರೆ ಎಂದು ಕೆನಡಾ ಮಾಧ್ಯಮಗಳು ವರದಿ ಮಾಡಿವೆ.

https://www.instagram.com/p/B9ecp-0Dh7g/

Share This Article
Leave a Comment

Leave a Reply

Your email address will not be published. Required fields are marked *