ನವದೆಹಲಿ: ಪಂಜಾಬ್ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಪಿಎಸ್‍ಎಸಿಎಸ್) ಏಡ್ಸ್ ತಡೆಗಟ್ಟಲು ತಪ್ಪು ಮಾಹಿತಿಯುಳ್ಳ ಕರಪತ್ರವನ್ನು ಹಂಚಿ ಎಡವಟ್ಟು ಮಾಡಿಕೊಂಡಿದೆ.
ಏಡ್ಸ್ ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕರಪತ್ರ ಮಾಡಿದ್ದೇವೆ ಎಂದು ಪ್ರಕಟಿಸಿರುವ ಸಂಸ್ಥೆ. ಮೊದಲಿಗೆ ಏಡ್ಸ್ ಬಂದಿರೋ ವ್ಯಕ್ತಿಗಳಿಗೆ ಶೇಕ್ ಹ್ಯಾಂಡ್ ಕೊಡಬೇಡಿ, ಅವರಿಂದಲೂ ಶೇಕ್ ಹ್ಯಾಂಡ್ ತೆಗೆದುಕೊಳ್ಳಬೇಡಿ ಎಂಬ ಸೂಚನೆಗಳನ್ನು ನೀಡಿದೆ. ಇಷ್ಟೇ ಅಲ್ಲದೇ ಇನ್ನು ಹಲವು ರೀತಿಯಲ್ಲಿ ಕಾಯಿಲೆ ಹರಡುವುದಾಗಿ ಹಾಗೂ ಸಂಕ್ರಾಮಿಕ ರೋಗವೆಂದು ತಪ್ಪು ಮಾಹಿತಿ ನೀಡಿದೆ.
Advertisement
ಕರಪತ್ರದಲ್ಲಿ ಏನಿದೆ?
1. ಏಡ್ಸ್ ರೋಗಿಗಳ ಜೊತೆ ಶೇಕ್ ಹ್ಯಾಂಡ್ ಮಾಡಿದ್ರೆ ನಿಮಗೂ ರೋಗ ಬರುತ್ತದೆ.
2. ರೋಗಿಗಳು ಬಳಸಿದ ಊಟದ ಪ್ಲೇಟ್, ಚೇರ್, ಮೊಬೈಲ್ ಫೋನ್, ಕಂಪ್ಯೂಟರ್‍ಯಿಂದ ಕಾಯಿಲೆ ಬರುತ್ತದೆ.
3. ಏಡ್ಸ್ ರೋಗಿಗಳು ಬಳಸಿದ ಶೌಚಾಲಯವನ್ನು ಬಳಸಿದರೂ ನಿಮಗೆ ರೋಗ ಬರುತ್ತದೆ.