ಬಳ್ಳಾರಿ: ತಾಯಿ ಪ್ರೀತಿ ಅಂದ್ರೆನೇ ಹಾಗೆ. ತಾಯಿ ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಹೊಂದಿರುತ್ತಾಳೋ ತಾಯಿಯ ಮೇಲೆ ಕರುಗಳೂ ಸಹ ಅಷ್ಟೇ ಪ್ರೀತಿ ಹೊಂದಿರುತ್ತವೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಆಕಳೊಂದು ಮೃತಪಟ್ಟ ನಂತರ ಕರುಗಳು ತಾಯಿ ಆಕಳನ್ನು ಮೇಲೆ ಎಬ್ಬಿಸಲು ಪ್ರಯತ್ನಿಸಿದ ಮನಕಲಕುವ ಘಟನೆವೊಂದು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ನಡೆದಿದೆ.
ಇಂದು ಬೆಳೆಗ್ಗೆ ಕಮಾಲಾಪುರದಲ್ಲಿ ವಿದ್ಯುತ್ ಶಾಕ್ ನಿಂದ ಆಕಳೊಂದು ಮೃತಪಟ್ಟಿದೆ. ನಂತರ ಆಕಳ ಕರುಗಳು ಸತ್ತು ಬಿದ್ದ ತಾಯಿ ಆಕಳನ್ನು ಎಬ್ಬಿಸಲು ಪ್ರಯತ್ನಿಸಿದ ದೃಶ್ಯ ಮನಕಲಕುವಂತಿತ್ತು.
ಕೆಇಬಿ ಕಚೇರಿ ಮುಂದಿನ ವಿದ್ಯುತ್ ಕಂಬದಲ್ಲಿ ವಿದ್ಯುತ್ ಸ್ಪರ್ಶವಾಗಿ ಆಕಳು ಮೃತಪಟ್ಟ ನಂತರ ಕರುಗಳು ತಾಯಿ ಆಕಳನ್ನ ಎಬ್ಬಿಸಲು ಪ್ರಯತ್ನಿಸಿದವು.
ಇದನ್ನೂ ಓದಿ: ತನ್ನ ಮರಿ ಸತ್ತಿದ್ರೂ, ಮುತ್ತು ಕೊಡುತ್ತಿರೋ ತಾಯಿ ಕೋತಿ- ಕೋಲಾರದಲ್ಲೊಂದು ಮನಕಲಕುವ ಘಟನೆ