ವ್ಯಾಟಿಕನ್ ಸಿಟಿ: ಮುಸ್ಲಿಂ ಪವಿತ್ರ ಗ್ರಂಥ ಕುರಾನ್‌ನ ಪ್ರತಿಗಳನ್ನು ಸಾರ್ವಜನಿಕವಾಗಿ ಸುಟ್ಟು, ಅದರ ಮೇಲೆ ಹಂದಿಯ ರಕ್ತವನ್ನು ಚೆಲ್ಲುವುದಾಗಿ ಹೇಳಿದ್ದ ಡ್ಯಾನಿಶ್ ರಾಜಕಾರಣಿಯ ಬೆದರಿಕೆಯಿಂದಾಗಿ ಕಳೆದ ನಾಲ್ಕು ದಿನಗಳಿಂದ ಸ್ವೀಡನ್‌ನ ನಗರಗಳಲ್ಲಿ ಪ್ರತಿಭಟನೆ ತೀವ್ರವಾಗಿದೆ.
ಸ್ವಿಡನ್ ನಗರಗಳಲ್ಲಿ ಮುಸ್ಲಿಂ ವಿರೋಧಿ ಹಾಗೂ ಬಲಪಂಥೀಯ ರಾಜಕೀಯ ಪಕ್ಷ ಸ್ಟ್ರಾಮ್ ಕುರ್ಸ್ ವಿರೋಧವಾಗಿ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರಗಳಲ್ಲಿ ಕಲ್ಲು ತೂರಾಟ, ಟಯರ್, ವಾಹನ ಹಾಗೂ ಕಸಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ದಕ್ಷಿಣ ಆಫ್ರಿಕಾ ತತ್ತರ – 443ಕ್ಕೆ ಏರಿದ ಸಾವಿನ ಸಂಖ್ಯೆ
Advertisement
Advertisement
ಭಾನುವಾರ ಸ್ವೀಡನ್‌ನ ನಾರ್ಕೋಪಿಂಗ್‌ನಲ್ಲಿ ಪೊಲೀಸರು ಗಲಭೆಕೋರರ ಮೇಲೆ ಗುಂಡು ಹಾರಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರು 17 ಜನರನ್ನು ಬಂಧಿಸಿದ್ದಾರೆ.
Advertisement
ಮಾಲ್ಮೋ ನಗರದಲ್ಲಿ ಭಾನುವಾರ ನಡೆದ ಬಲಪಂಥೀಯರ ಮೆರವಣಿಗೆ ವೇಳೆ ಬಸ್ ಹಾಗೂ ಇತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಗಲಭೆಯನ್ನು ಪ್ರತಿಭಟಿಸಲು ಇನಾನ್ ಹಾಗೂ ಇರಾಕ್ ಸರ್ಕಾರ ಸ್ವೀಡನ್ ರಾಯಭಾರಿಗೆ ಕರೆ ನೀಡಿವೆ. ಇದನ್ನೂ ಓದಿ: 20 ಸಿಸಿ ಕ್ಯಾಮೆರಾ ನಿಷ್ಕ್ರಿಯ, 7 ನಾಪತ್ತೆ – ಪೊಲೀಸರಿಗೆ ತಲೆನೋವಾದ ಹುಬ್ಬಳ್ಳಿ ಪುಂಡರ ಪತ್ತೆ ಕಾರ್ಯ
Advertisement
ಕಳೆದ 4 ದಿನಗಳಿಂದ ಮುಂದುವರಿದಿರುವ ಅಶಾಂತಿಯಿಂದಾಗಿ ಸುಮಾರು 16 ಪೊಲೀಸರು ಗಾಯಗೊಂಡಿದ್ದಾರೆ. ಹಲವಾರು ಪೊಲೀಸ್ ವಾಹನಗಳು ಧ್ವಂಸಗೊಂಡಿವೆ ಎಂದು ವರದಿಗಳು ತಿಳಿಸಿವೆ.