ಕೊಪ್ಪಳ: ನನ್ನ ನಂಬರ್ ತಗೊಳ್ಳಿ, ಪೊಲೀಸ್ ಅಧಿಕಾರಿಗಳು ತೊಂದ್ರೆ ಕೊಟ್ರೆ ನನ್ನ ನಂಬರ್‍ಗೆ ಫೋನ್ ಮಾಡಿ. ಚುನಾವಣಾಧಿಕಾರಿಯಾಗಿರೋ ಜಿಲ್ಲಾಧಿಕಾರಿ ನಿಯಮ ಉಲ್ಲಂಘಿಸಿ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸಲು ನಿಮಗೆ ಅಡ್ಡಿಪಡಿಸಿದ್ರೆ ನಮಗೆ ದೂರು ಕೊಡಿ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಕರ್ನಾಟಕ ಗೆಲ್ಲಲು ವರ್ಷಕ್ಕೂ ಮೊದಲೇ ತಂತ್ರಗಾರಿಕೆಗೆ ಇಳಿದಿದ್ದ ಶಾ, ಶುಕ್ರವಾರ ಕೊಪ್ಪಳದಲ್ಲಿ ನಡೆದ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ರು, ಈ ವೇಳೆ ನೀವು ದೂರು ನೀಡಿದ್ರೆ ನಾವು ಚುನಾವಣಾ ಆಯೋಗಕ್ಕೆ ತಿಳಿಸಿ ಅವರ ವರ್ಗಾವಣೆಗೆ ಪ್ರಯತ್ನ ಮಾಡ್ತೇವೆ ಅಂತ ಹೇಳಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಫುಲ್ ಕ್ಲಾಸ್
Advertisement
ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಚುನಾವಣಾ ಕಣ ರಂಗೇರಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಇಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಸಂಘಟನಾ ಸಭೆಗಳನ್ನು ನಡೆಸುವ ಮೂಲಕ ಚುನಾವಣಾ ತಂತ್ರವನ್ನು ಹೆಣೆದಿದ್ದಾರೆ. ಅಲ್ಲದೆ, ಬಿಜೆಪಿಗರಿಗೆ ಗೆಲುವಿನ ಪಾಠ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಎಂಎಸ್‍ಪಿಎಲ್ ಖಾಸಗಿ ಏರ್ ಪೋರ್ಟ್‍ಗೆ ಆಗಮಿಸಿದ ಅಮಿತ್ ಷಾ ಅವರು ನಗರದ ಶಿವಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಂಘಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಗವಿಸಿದ್ದೇಶ್ವರ ಮಠದ ಕತೃಗದ್ದುಗೆಯ ದರ್ಶನವನ್ನು ಪಡೆದುಕೊಂಡರು. ಅಲ್ಲದೆ, ಶ್ರೀಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದರ್ಶನ ಆಶೀರ್ವಾದ ಪಡೆದುಕೊಂಡಿದ್ದರು.