ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಡಾಬಾ ಮಾಲೀಕ

Public TV
1 Min Read
dharwad cake

ಧಾರವಾಡ:ಇತ್ತೀಚೆಗೆ ಯುವಕರು ಬರ್ತ್‍ಡೇ ಸಮಯದಲ್ಲಿ ತಲ್ವಾರ್‌ನಿಂದ ಕೇಕ್ ಕಟ್ ಮಾಡುವುದು ಟ್ರೆಂಡ್ ಎಂದು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಯುವಕನೊಬ್ಬ ತನ್ನ ಹುಟ್ಟುಹಬ್ಬದ ದಿನದಂದು ತಲ್ವಾರ್‌ನಿಂದ ಕೇಕ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

dharwad cake

ಧಾರವಾಡ ಹೊರವಲಯದ ಸಲಕಿನಕೊಪ್ಪ ಗ್ರಾಮದ ಬಳಿ ಇರುವ ತನ್ನ ಸಾಯಿ ಡಾಬಾದಲ್ಲಿ ಬರ್ತ್ ಡೇ ಪಾರ್ಟಿ ಇಟ್ಟುಕೊಂಡಿದ್ದ ಪ್ರವೀಣ್ ಸಂದೀಮನಿ ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಹುಚ್ಚಾಟ ಮೆರೆದಿದ್ದಾನೆ. ಅಲ್ಲದೇ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಸದ್ಯ ಈತನ ಬರ್ತ್‍ಡೇ ಪಾರ್ಟಿ ಫೋಟೋಗಳು ಮತ್ತು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಲಾಂಗ್‍ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ ಅರೆಸ್ಟ್

ಇದಲ್ಲದೇ ಇತ್ತೀಚೆಗಷ್ಟೇ ಕರ್ನಾಟಕದ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸಗೂರ ಪುತ್ರ ಸುರೇಶ್ ಐಫೋನ್ ಬಳಸಿ ವಿಭಿನ್ನವಾಗಿ ಕೇಕ್ ಕಟ್ ಮಾಡಿದ ವೀಡಿಯೋವೊಂದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದನ್ನೂ ಓದಿ: ಕೇಕ್ ಕತ್ತರಿಸಿ ಹುಂಜಗಳ ಹುಟ್ಟುಹಬ್ಬ ಆಚರಣೆ

Share This Article