ಬೆಂಗಳೂರು: ಕೇಕ್ ಅಂದರೆ ಚಿಕ್ಕೋರಿಂದ ಹಿಡಿದು ದೊಡ್ಡೋರವರೆಗೂ ಫೇವರೇಟ್. ವೆರೈಟಿ ವೆರೈಟಿ ಕೇಕ್ ಲೋಕವೇ ಜಿಕೆವಿಕೆ ಕ್ಯಾಂಪಸ್ ನಲ್ಲಿ ಅನಾವರಣಗೊಂಡಿದ್ದವು.
ನಗರದ ಜಿಕೆವಿಕೆ ಕ್ಯಾಂಪಸ್ ನಲ್ಲಿ ಬೇಕರಿ ಟ್ರೈನಿಂಗ್ ಯುನಿಟ್ ವತಿಯಿಂದ ವಿದ್ಯಾರ್ಥಿಗಳೇ ಸ್ವತಃ ಕೇಕ್ ತಯಾರಿಸಿ ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ವೆರೈಟಿಯ ಕೇಕ್ ಗಳು ಪ್ರದರ್ಶನದಲ್ಲಿ ಇದ್ದವು. ಫ್ರೂಟ್ಸ್ ನಿಂದ ತಯಾರಿಸಲಾದ ಕೇಕ್ ಎಲ್ಲಕ್ಕಿಂತ ಡಿಫರೆಂಟ್ ಆಗಿದ್ದು, ಎಲ್ಲರ ಗಮನ ಸೆಳೆದಿವೆ.
ವಿವಿಧ ರೀತಿಯ ಬಣ್ಣ, ಶೇಪ್ ನಲ್ಲಿ ವಿದ್ಯಾರ್ಥಿಗಳು ಕೇಕ್ ತಯಾರಿಸಿದ್ದರು. ಜೊತೆಗೆ ಮೂರು ಬಣ್ಣಗಳಲ್ಲಿ ಟ್ರೈನ್ ಎಂಜಿನ್ ಕೇಕ್ ತಯಾರಿಸಲಾಗಿತ್ತು. ಅಷ್ಟೇ ಅಲ್ಲದೇ ಸಾವಯವ ಪದಾರ್ಥಗಳಿಂದಲೂ ವಿದ್ಯಾರ್ಥಿಗಳು ಕೇಕ್ ತಯಾರಿಸಿದ್ದು, ವಿಶೇಷವಾಗಿತ್ತು.
ಕೇಕ್ ಶೋದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೇಕ್ ಪ್ರಿಯರು ಭಾಗವಹಿಸಿದ್ದು, ತಮ್ಮಿಷ್ಟದ ಕೇಕನ್ನು ತಿಂದು ಎಂಜಾಯ್ ಮಾಡಿದ್ದಾರೆ. ಬೇಕರಿಯಲ್ಲಿ ಕೇವಲ ಐದಾರು ಬಗೆಯ ಕೇಕ್ ಗಳನ್ನೂ ನೋಡಿ ಬೇರೆ ಫ್ಲೇವರ್ ಇಲ್ವಾ ಅಂತಾ ಮೂಗು ಮೂರಿಯೋರಿಗೆ ಈ ಕೇಕ್ ಪ್ರದರ್ಶನದಲ್ಲಿ ವಿವಿಧ ರೀತಿಯ ಕೇಕ್ ಮಾಡಿಸಿದ್ದು ವಿಶೇಷವಾಗಿತ್ತು ಎಂದು ಕೇಕ್ ಪ್ರಿಯರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv