ಬೆಂಗಳೂರು: ಕೇಕ್ ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಕೇಕ್ ಪ್ರಿಯರಿಗಾಗಿಯೇ ಸಿಲಿಕಾನ್ ಸಿಟಿಯಲ್ಲಿ ಸಖತ್ ಟೇಸ್ಟಿ ಶೋವೊಂದನ್ನು ಆಯೋಜಿಸಲಾಗಿದೆ.
ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನದಲ್ಲಿ ವಿಶ್ವದ ಅತೀ ದೊಡ್ಡ 44ನೇ ಕೇಕ್ ಶೋ ಏರ್ಪಡಿಸಲಾಗಿದೆ. ಇನ್ಸ್ ಸ್ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್‍ನಿಂದ, ಇಂದಿನಿಂದ ಜನವರಿ 1ರವರೆಗೆ ಈ ಟೇಸ್ಟಿ ಶೋ ಆಯೋಜಿಸಲಾಗಿದೆ. ಈ ಶೋ ಸಕ್ಸಸ್ ಗೆ 40 ಜನ 5 ತಿಂಗಳುಗಳ ಕಾಲ ಶ್ರಮಿಸಿದ್ದಾರೆ. ಈ ಶೋ ಇಕೋ ಫ್ರೇಂಡ್ಲಿಯಾಗಿದ್ದು, ಕೊಡಗು, ಕೇರಳದ ಪಾಕೃತಿಕ ವಿಕೋಪಗಳನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.
Advertisement
Advertisement
ಶೋನಲ್ಲಿರುವ ಒಂದೊಂದು ಕೇಕ್ ಗಳು ಒಂದೊಂದು ಕತೆ ಹೇಳುತ್ತವೆ. ಈ ಬಾರಿಯ ಕೇಕ್ ಶೋದ ಪ್ರಮುಖ ಅಟ್ರಾಕ್ಷನ್ ಮೊಘಲರು ಕಟ್ಟಿದ ಕೆಂಪು ಕೋಟೆಯಾಗಿದೆ. ಈ ಐತಿಹಾಸಿಕ ಕಟ್ಟಡವನ್ನು 1600 ಕೆ.ಜಿ. ಸಕ್ಕರೆ ಹಾಗೂ ರಾಯಲ್ ಐಸಿಂಗ್ ನಿಂದ ತಯಾರಿಸಲಾಗಿದೆ. ಇದರ ಜೊತೆಗೆ ಹಿಮಬಂಡೆಯ ಮೇಲೆ ನಿಂತಿರುವ ನೂರಾರು ಪೆಂಗ್ವಿನ್‍ಗಳು, 140 ತೂಕದ ಅಲ್ಲಾವುದ್ದೀನ್ ಮಾಯಾದೀಪ ಗಮನ ಸೆಳೆಯುತ್ತಿದೆ.
Advertisement
Advertisement
ಮಕ್ಕಳನ್ನು ಬಟರ್ ಫ್ಲೈ ಫೇರಿ ಡಾಲ್, ಸಾಂತಾ ಕ್ಲಾಸ್ ಹಾಗೂ ಜೋಕರ್ ಗಳು ಕೈ ಬೀಸಿ ಕರೆಯುತ್ತಿವೆ. ಬಾನಂಗಳದಲ್ಲಿ ವಿವಾಹ ಮಹೋತ್ಸವ ಆಚರಿಸುವ ಹಾಲೋ ವೆಡ್ಡಿಂಗ್ ಕೇಕ್ ತಯಾರಿಸಲಾಗಿದೆ. ಶಾಂತಚಿಂತದ ಬುದ್ಧ, ಚೈನೀಸ್ ಪಗೋಡಾ, ಚಿಟ್ಟೆ, ಗೊಂಬೆಗಳು, ಏಸು ಮೂರ್ತಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿವೆ. ಈ ಶೋ ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, 49 ರೂಪಾಯಿ ಪ್ರವೇಶ ಶುಲ್ಕ ವಿಧಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv