ಬೆಂಗಳೂರು: ದೇಶ-ವಿದೇಶಗಳಲ್ಲಿ ಹೆಸರು ವಾಸಿಯಾದ ಬಾಣಸಿಗರು ಹಲವು ಬಗೆಯ ಡಿಶೆಸ್ ರೆಡಿ ಮಾಡಿ ಡಿಸೈನ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕೇಕ್ ಲೋಕ ಧರೆಗಿಳಿದಿದೆ. ಭಾನುವಾರದವರೆಗೆ ದಕ್ಷಿಣ ಭಾರತದ ಅತೀ ದೊಡ್ಡ ಆಹಾರ ಮತ್ತು ಆತಿಥ್ಯ ಮೇಳ ಆಯೋಜಿಸಲಾಗಿದೆ. ಇಲ್ಲಿ ದೇಶದ 150ಕ್ಕೂ ನಳಪಾಕ ಪ್ರವೀಣರು, ವಿವಿಧ ಡಿಸೈನ್‍ಗಳನ್ನು ತಯಾರಿಸಿ ಕೇಕ್‍ನಲ್ಲೇ ಕಮಾಲ್ ಮಾಡಿದರು.
ರಂಗು ರಂಗಾಗಿರುವ ಹ್ಯಾಂಗಿಗ್ ಕೇಕ್ಸ್, ಕ್ಯೂಟ್ ಕ್ಯೂಟ್ ಆಗಿ ಪೋಸ್ ಕೊಡುತ್ತಿರುವ ಕಪಲ್ಸ್ ಕೇಕ್, ಪುಟಾಣಿಗಳನ್ನು ಆಕರ್ಷಿಸುತ್ತಿರುವ ಹಾರ್ಸ್, ಎಲೆಫೆಂಟ್, ಸೀ ಕ್ವೀನ್, ಇವೆಲ್ಲವುಗಳನ್ನು ಕಣ್ಣು ಕುಕ್ಕುವಂತೆ ಯುವತಿಯರು ರೆಡಿ ಮಾಡುತ್ತಿದ್ದಾರೆ.
ಕೇಕ್‍ನಲ್ಲಿಯೇ ಭ್ರೂಣಾವಸ್ಥೆಯಿಂದ 10 ತಿಂಗಳ ಮಗುವನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ. ತೂಗು ಉಯ್ಯಾಲೆಯ ವೆಡ್ಡಿಂಗ್ ಕೇಕ್ಸ್, ಸಾಂಪ್ರದಾಯಿಕವಾಗಿ ಮಿಂಚುತ್ತಿರುವ ನವಜೋಡಿ ಎಲ್ಲರನ್ನೂ ಅಟ್ರಾಕ್ಟ್ ಮಾಡುತ್ತಿವೆ. ಜೊತೆಗೆ ಎಪಿಜೆ ಅಬ್ದುಲ್ ಕಲಾಂ, ಅಬ್ರಹಾಂ ಲಿಂಕನ್ ಪ್ರತಿಮೆಗಳು ನೋಡುಗರ ಮನಸೂರೆಗೊಳಿಸುತ್ತಿವೆ. ಒಟ್ಟಿನಲ್ಲಿ ಈ ಆಹಾರ ಮೇಳದಲ್ಲಿ ಇರುವ ಒಂದೊಂದು ಕೇಕ್‍ಗಳು ಒಂದೊಂದು ಕತೆ ಹೇಳುತ್ತಿವೆ.