ಅಮರಾವತಿ: ಆಂಧ್ರಪ್ರಧೇಶದ (Andhra Pradesh) ಸತೀಶ್ ಧವನ್ (Satish Dhawan Space Centre) ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರದ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರದ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದೆ. ಈ ಉಡಾವಣಾ ಕೇಂದ್ರ ಇಸ್ರೋದ ಎನ್‌ಜಿಎಲ್‌ವಿ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: Chhattisgarh| ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ- 12 ಮಾವೋವಾದಿಗಳು ಬಲಿ
Advertisement
Advertisement
ಈ ಮೂಲಕ ಮೂರನೇ ಉಡಾವಣಾ ಕೇಂದ್ರವು ಭಾರತೀಯ ಅಂತರಿಕ್ಷ ನಿಲ್ದಾಣ ಸ್ಥಾಪನೆಗೆ ಹಾಗೂ 2024ರ ವೇಳೆಗೆ ಮಾನವನನ್ನು ಚಂದ್ರನ ಬಳಿ ಕಳುಹಿಸುವ ಯೋಜನೆಗೆ ಇದು ಸಹಕಾರಿಯಾಗಲಿದೆ. ಉಡಾವಣಾ ಕೇಂದ್ರವನ್ನು 4 ವರ್ಷಗಳ ಅವಧಿಯಲ್ಲಿ 3,984.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ನಿರೀಕ್ಷೆಯಿದ್ದು, ಇದು ಉಡಾವಣಾ ಕೇಂದ್ರದ ಸ್ಥಾಪನೆ ಮತ್ತು ವಾಹನ ಜೋಡಣೆ, ಉಪಗ್ರಹ ತಯಾರಿಕೆ ಮತ್ತು ಇಂಧನ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
Advertisement
ಸದ್ಯ ಬಾಹ್ಯಾಕಾಶ ಕೇಂದ್ರದಲ್ಲಿ ಎರಡು ಉಡಾವಣಾ ಕೇಂದ್ರಗಳಿದ್ದು, ಪಿಎಸ್‌ಎಲ್‌ವಿ, ಎಸ್‌ಎಸ್‌ಎಲ್‌ವಿ ರಾಕೆಟ್‌ಗಳ ಉಡಾವಣೆಗಾಗಿ 30 ವರ್ಷಗಳ ಹಿಂದೆ ಮೊದಲ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಯಿತು. ಅದಾದ 20 ವರ್ಷಗಳ ಬಳಿಕ ಎರಡನೇ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಯಿತು. ಇದು ಜಿಎಸ್‌ಎಲ್‌ವಿ ಹಾಗೂ ಎಲ್‌ವಿಎಮ್3 ರಾಕೆಟ್‌ಗಳ ಉಡಾವಣೆಗಾಗಿ ಬಳಸಲಾಗುತ್ತದೆ.
Advertisement
ಇದೀಗ ಹೊಸ ಉಡಾವಣಾ ಕೇಂದ್ರವು, 2ನೇ ಉಡಾವಣಾ ಕೇಂದ್ರದ ಬ್ಯಾಕಪ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರವಾದ ರಾಕೆಟ್ ಉಡಾವಣೆಗಾಗಿ ಬಳಸಬಹುದಾಗಿದೆ.ಇದನ್ನೂ ಓದಿ:ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು- ಉಪರಾಷ್ಟ್ರಪತಿ ಜಗದೀಪ್ ಧನಕರ್