ಉಡುಪಿ ಮತ್ತು ಮಂಗಳೂರಿನ ಕರಾವಳಿ ಸ್ಥಳವು ಸಾತ್ವಿಕ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇದು ಉಪಾಹಾರ, ಬಾಳೆ ಎಲೆ ಊಟಕ್ಕೆ ವ್ಯಾಪಕವಾಗಿ ಜನಪ್ರಿಯವಾಗಿದೆ. ಆದರೆ ಪತ್ರೋಡೆ ರೆಸಿಪಿ ಸಾಂಪ್ರದಾಯಿಕ ಸ್ನ್ಯಾಕ್ಸ್ ಪಾಕವಿಧಾನವಾಗಿದ್ದು, ಕೊಲೊಕೇಶಿಯಾ/ಕೆಸು ಎಲೆಯಲ್ಲಿ ಮಾಡಲಾಗುತ್ತದೆ. ಈ ವಿಧಾನ ಸುಲಭವಾಗಿದ್ದು, ಮನೆಯಲ್ಲಿ ಮಾಡಿ ಸವಿಯಿರಿ.
Advertisement
ಬೇಕಾಗಿರುವ ಪದಾರ್ಥಗಳು:
* ಅಕ್ಕಿ – 1 ಕಪ್
* ಉದ್ದಿನ ಬೇಳೆ – 2 ಟೇಬಲ್ಸ್ಪೂನ್
* ತುರಿದ ತೆಂಗಿನಕಾಯಿ – 1 ಕಪ್
* ಕೊತ್ತಂಬರಿ ಬೀಜ – 2 ಟೀಸ್ಪೂನ್
* ಜೀರಿಗೆ – 1 ಟೀಸ್ಪೂನ್
* ಮೆಂತ್ಯೆ ಬೀಜ – ಅರ್ಧ ಟೀಸ್ಪೂನ್
* ಅರಿಶಿನ – ಅರ್ಧ ಟೀಸ್ಪೂನ್
* ಬೆಲ್ಲ – ಅರ್ಧ ಕಪ್
* ಹುಣಿಸೇಹಣ್ಣು – 30 ಗ್ರಾಂ
* ಉಪ್ಪು – 1 ಟೀಸ್ಪೂನ್
* ಒಣಗಿದ ಕೆಂಪು ಮೆಣಸಿನಕಾಯಿ – 7
* ಕೊಲೊಕೇಶಿಯಾ ಎಲೆಗಳು/ ಕೆಸುವಿನ ಎಲೆ – 20
Advertisement
Advertisement
ಒಗ್ಗರಣೆಗೆ ಬೇಕಾದ ಪದಾರ್ಥ:
* ತೆಂಗಿನ ಎಣ್ಣೆ – 2 ಟೇಬಲ್ಸ್ಪೂನ್
* ಸಾಸಿವೆ – 1 ಟೀಸ್ಪೂನ್
* ಉದ್ದಿನ ಬೇಳೆ – 1 ಟೀಸ್ಪೂನ್
* ಕಡ್ಲೆ ಬೇಳೆ – 1 ಟೀಸ್ಪೂನ್
* ಕಡ್ಲೆ ಬೀಜ – 2 ಟೇಬಲ್ಸ್ಪೂನ್
* ಕರಿ ಬೇವಿನ ಎಲೆ – ಅರ್ಧ ಕಪ್
* ತುರಿದ ತೆಂಗಿನಕಾಯಿ – ಅರ್ಧ ಕಪ್
* ಬೆಲ್ಲ – 2 ಟೇಬಲ್ಸ್ಪೂನ್
Advertisement
ಮಾಡುವ ವಿಧಾನ:
* ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ ಮತ್ತು 2 ಟೇಬಲ್ಸ್ಪೂನ್ ಉದ್ದಿನ ಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಮಿಕ್ಸರ್ ಹಾಕಿ ರುಬ್ಬಿಕೊಳ್ಳಿ.
* ಈ ಮಿಶ್ರಣಕ್ಕೆ ತೆಂಗಿನಕಾಯಿ, ಕೊತ್ತಂಬರಿ ಬೀಜ, ಜೀರಾ, ಮೆಂತ್ಯೆ ಮತ್ತು ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ.
* ಬೆಲ್ಲ, ಹುಣಿಸೇಹಣ್ಣು, ಉಪ್ಪು ಮತ್ತು ಕೆಂಪು ಮೆಣಸಿನಕಾಯಿಯನ್ನು ಸೇರಿಸಿ. ಅಗತ್ಯವಿರುವಂತೆ ನೀರನ್ನು ಸೇರಿಸಿ ರುಬ್ಬಿಕೊಳ್ಳಿ. ಈಗ ಮಸಾಲಾ ಪೇಸ್ಟ್ ಸಿದ್ಧವಾಗಿದೆ.
* ಕೆಸುವಿನ ಎಲೆಗಳನ್ನು ತೆಗೆದುಕೊಂಡು ಗೆರೆಗಳನ್ನು ಟ್ರಿಮ್ ಮಾಡಿ. ಮಸಾಲಾ ಪೇಸ್ಟ್ ಎಲೆಗೆ ಸಮವಾಗಿ ಹರಡಿ.
* ಕೆಸುವಿನ ಎಲೆಗಳಿಗೆ 4 ಬಾರಿ ಮಸಾಲಾ ಪೇಸ್ಟ್ ಹರಡಿ. ಈಗ ಎಲೆಯ ಒಂದು ಬದಿಗಳನ್ನು ಮಡಚಿ ರೋಲ್ ಮಾಡಿ. 30 ನಿಮಿಷಗಳ ಕಾಲ ಸ್ಟೀಮ್ ಮಾಡಿ. ತಣ್ಣಗಾದ ಮೇಲೆ ಅದನ್ನು ಕಟ್ ಮಾಡಿ.
* ತೆಂಗಿನ ಎಣ್ಣೆಯನ್ನು ಬಿಸಿ ಮಾಡುವ ಮೂಲಕ ಒಗ್ಗರಣೆಯನ್ನು ತಯಾರಿಸಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಪೀನಟ್ಸ್ ಮತ್ತು ಕರಿ ಬೇವಿನ ಎಲೆಗಳನ್ನು ಸೇರಿಸಿ.
* ಅದಕ್ಕೆ ತೆಂಗಿನಕಾಯಿ ಮತ್ತು ಬೆಲ್ಲವನ್ನು ಸೇರಿಸಿ. ಒಂದು ನಿಮಿಷ ಅಥವಾ ತೆಂಗಿನಕಾಯಿ ವಾಸನೆ ಹೋಗುವವರೆಗೂ ಫ್ರೈ ಮಾಡಿ.
* ಅಲ್ಲದೇ ತುಂಡರಿಸಿದ ಪತ್ರೋಡೆ ತುಣುಕುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
– ಪತ್ರೋಡೆಯನ್ನು ಬೆಳಗಿನ ತಿಂಡಿ ಅಥವಾ ಸಂಜೆಯ ಸ್ನ್ಯಾಕ್ಸ್ ಗೆ ಮಾಡಿ ಆನಂದಿಸಿ.