– ಸಮ್ ಒನ್ ಪ್ಲೀಸ್ ಹೆಲ್ಪ್ ಮಿ ಹೆಲ್ಪ್ ಮಿ ಗೋಗರೆದ ಯುವತಿ
– ಬೆಂಗಳೂರು ಪೊಲೀಸರಿಗೆ ಫೇಸ್‍ಬುಕ್‍ನಲ್ಲಿ ದೂರು
ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿ 7 ಕಿ.ಮೀ ದೂರ ಹಿಂಬಾಲಿಸಿ ಮಹಿಳಾ ಟೆಕ್ಕಿಗೆ ಕಿರುಕುಳ ಕೊಟ್ಟ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಹಿಳಾ ಟೆಕ್ಕಿ ಕಳೆದ 4ರಂದು ಎಲೆಕ್ಟ್ರಾನಿಕ್ ಸಿಟಿಯ ತನ್ನ ಕಚೇರಿಗೆ ತೆರಳುತ್ತಿದರು. ಈ ವೇಳೆ ಮಹಿಳಾ ಟೆಕ್ಕಿ ಕಾರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಕ್ಯಾಬ್ ಡ್ರೈವರ್ ದುಂಡಾವರ್ತನೆ ತೋರಿದ್ದಾನೆ. ಸಿಲ್ಕ್ ಬೊರ್ಡ್ ಜಂಕ್ಷನ್ ನಲ್ಲಿ ಯುವತಿಯ ಕಾರು ಕ್ಯಾಬ್ ಗೆ ತಾಗಿದೆ. ಘಟನೆಯಲ್ಲಿ ಕ್ಯಾಬ್ ಡ್ರೈವರ್ ಹಾಗೂ ಯುವತಿಯ ಕಾರಿಗೆ ಯಾವುದೇ ಹಾನಿಯಾಗಿಲ್ಲ.
Advertisement
Advertisement
ಕಾರು ತಾಗಿದ ನಂತರ ಐ ಯಾಮ್ ಸಾರಿ ಸರ್ ಅಂತ ಮಹಿಳಾ ಟೆಕ್ಕಿ ಕ್ಷಮೆ ಕೋರಿದರು. ಯುವತಿ ಕ್ಷಮೆ ಕೇಳಿದರೂ ಸುಮ್ಮನಾಗದ ಕ್ಯಾಬ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕ್ಯಾಬ್ ಡ್ರೈವರ್ ವರ್ತನೆಯಿಂದ ಗಾಬರಿಗೊಂಡ ಯುವತಿ ಕಾರಿನಿಂದ ಕೆಳಗಡೆ ಇಳಿದಿಲ್ಲ. ಯುವತಿ ಸಿಗ್ನಲ್ ಬಿಟ್ಟ ನಂತರ ತನ್ನ ಕಾರನ್ನು ಸಿಲ್ಕ್ ಬೊರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ನತ್ತ ಚಲಾಯಿಸಿದ್ದಾರೆ.
Advertisement
ಕ್ಯಾಬ್ ಡ್ರೈವರ್ ಹಿಂಬದಿಯಿಂದ ಯುವತಿಯ ಕಾರನ್ನು ಹಿಂಬಾಲಿಸಿಕೊಂಡು ಬಂದು ರ‍್ಯಾಶ್ ಡ್ರೈವ್ ಮಾಡಿ ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‍ವರೆಗೂ ಕಾಟ ಕೊಟ್ಟಿದ್ದಾನೆ. ಚಾಲಕ ರಸ್ತೆಯಲ್ಲಿ ಮೂರು ಬಾರಿ ಯುವತಿಯ ಕಾರನ್ನು ಅಡ್ಡಗಟ್ಟಿ ವಿಕೃತಿ ಮೆರೆದಿದ್ದಾನೆ.
Advertisement
ಕ್ಯಾಬ್ ಡ್ರೈವರ್ ನ ಕಾಟಕ್ಕೆ ಯುವತಿ ಕಾರನ್ನು ನಿಲ್ಲಿಸದೇ, ಡ್ರೈವ್ ಮಾಡುತ್ತಲೇ ವಾಹನ ಸವಾರರ ಸಹಾಯ ಚಾಚಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ವರೆಗೂ ಯುವತಿ ಕಣ್ಣಿರಿಡುತ್ತಾ ಸಮ್ ಒನ್ ಪ್ಲೀಸ್ ಹೆಲ್ಪ್ ಮಿ ಹೆಲ್ಪ್ ಮಿ ಗೋಗರೆದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಸಮಿಪಿಸುತ್ತಿದ್ದಂತೆ ಕಿರಾತಕ ಕ್ಯಾಬ್ ಡ್ರೈವರ್ ಪರಾರಿಯಾಗಿದ್ದಾನೆ. ನೊಂದ ಯುವತಿ ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಪೇಜ್ ನಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಕೆಎ-01-ಎಜಿ 6553 ಸಂಖ್ಯೆಯ ಕಂದು ಬಣ್ಣದ ಕ್ಯಾಬ್ ಎಂದು ಉಲ್ಲೇಖಿಸಿದ್ದಾರೆ. ಸದ್ಯ ಆರೋಪಿ ಕ್ಯಾಬ್ ಡ್ರೈವರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಟೆಕ್ಕಿ ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv