ಬೆಂಗಳೂರು: ಕೊರೊನಾದಿಂದ ತಪ್ಪಿಸಿಕೊಳ್ಳಲು ನಗರದ ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರಿಗೆ ಉಚಿತ ಮಾಸ್ಕ್ ಹಂಚುತ್ತಿದ್ದಾರೆ.
ಆಜಂ ಖಾನ್ ವೃತ್ತಿಯಲ್ಲಿ ಡ್ರೈವರ್ ಆಗಿದ್ದು, ತಮ್ಮ ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಮಾಸ್ಕ್ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಯಾಣಿಕರೊಬ್ಬರು ಆಜಂ ಖಾನ್ ಅವರಿಗೆ ಮಾಸ್ಕ್ ಉಡುಗೊರೆಯನ್ನಾಗಿ ನೀಡಿದ್ದರು. ಇದಾದ ಬಳಿಕ ಆಜಂ ತಾವು ಕೂಡ ಮಾಸ್ಕ್ ನೀಡುವ ಮೂಲಕ ಜನರಿಗೆ ಅರಿವು ಮೂಡಿಸಲು ನಿರ್ಧರಿಸಿದ್ದರು.
Advertisement
Advertisement
ಪ್ರತಿದಿನ ಆಜಂ ಖಾನ್ 10ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಖರೀದಿಸುತ್ತಾರೆ. ಒಂದು ಮಾಸ್ಕ್ ನ ಬೆಲೆ 30ರಿಂದ 40 ರೂ. ಇರುತ್ತದೆ. ಆಜಂ ಪ್ರಯಾಣಿಕರಿಗೆ ಮೊದಲು ಅವರ ಬಳಿ ಮಾಸ್ಕ್ ಇದೆಯಾ ಎಂದು ಕೇಳುತ್ತಾರೆ. ಅವರ ಇಲ್ಲ ಎಂದರೆ ಮಾತ್ರ ಮಾಸ್ಕ್ ಅನ್ನು ನೀಡುತ್ತಾರೆ. ಅಲ್ಲದೆ ಕ್ಯಾಬ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಎಸಿ ಆಫ್ ಇರಲಾ ಅಥವಾ ಆನ್ ಇರಲಾ ಎಂಬುದನ್ನು ಕೇಳುತ್ತಿರುತ್ತಾರೆ.
Advertisement
Advertisement
ಈ ಬಗ್ಗೆ ಮಾತನಾಡಿದ ಆಜಂ ಖಾನ್, ಕ್ಯಾಬ್‍ನಲ್ಲಿ ಎಲ್ಲ ತರಹದ ಜನರು ಪ್ರಯಾಣಿಸುತ್ತಾರೆ. ಕ್ಯಾಬ್ ಕೂಡ ಪಬ್ಲಿಕ್ ಪ್ಲೇಸ್‍ನಂತೆ, ಇಲ್ಲಿ ಎಲ್ಲಾ ರೀತಿಯ ಪ್ರಯಾಣಿಕರು ಬರುತ್ತಾರೆ. ಕೆಲವು ಬಾರಿ ನಾನು ಏರ್ ಪೋರ್ಟ್‍ಗೂ ಹೋಗುತ್ತೇನೆ. ಈ ವೈರಸ್ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಬಹಳ ಮುಖ್ಯ. ನಾನು ಅದನ್ನು ತೆಗೆದುಕೊಂಡು ಜನರಿಗೆ ಅದರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಸೋಮವಾರ ಮಾರುಕಟ್ಟೆಯಲ್ಲಿ ಮಾಸ್ಕ್ ಗಳು ಖಾಲಿ ಆಗಿದ್ದವು. ಆದರೂ ಕೆಲ ಪ್ರಯಾಣಿಕರಿಗೆ ಮಾಸ್ಕ್ ಹಂಚುತ್ತೇನೆ ಎಂದರು.