ಬೆಂಗಳೂರು: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿ ಮಾಡಬೇಕೇ? ಬೇಡ್ವೇ ಎಂಬುದರ ಬಗ್ಗೆ ಕ್ಯಾಬಿನೆಟ್‌ನಲ್ಲಿ (Cabinet) ತೀರ್ಮಾನ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr G Parmeshwaar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅದರ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ. ಸಿಎಂ ಸಚಿವ ಸಂಪುಟ ಸಭೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಅವೆಲ್ಲವನ್ನೂ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಕ್ಕೆ ಟಿಕೆಟ್ ಕೊಡ್ತಿಲ್ಲ: ಸಿದ್ದರಾಮಯ್ಯ
Advertisement
Advertisement
ಸಿಎಎಯಿಂದ ಕಾಂಗ್ರೆಸ್ (Congress) ಹಿನ್ನಡೆ ಭೀತಿ ಇದೆ ಅಂತ ಬಿಜೆಪಿಯವರು ಹೇಳುತ್ತಾರೆ. ಬಿಜೆಪಿಯವರು ತಂದಿದ್ದಾರೆ. ನಮ್ಮ ಮೇಲೆ ಎನಾದರೂ ಆರೋಪ ಮಾಡಬೇಕು ಅಲ್ವಾ? ನಾವು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಬೇಕು ಎಂಬುದು ನಮ್ಮ ವಾದ. ಇಷ್ಟು ದಿನ ಸುಮ್ಮನೆ ಇದ್ದು ಈಗ ರಾಜಕೀಯಕ್ಕೆ ಬಳಸ್ತಾರೆ. ಚುನಾವಣಾ ಸಂದರ್ಭದಲ್ಲಿ ಯಾಕೆ ತರಬೇಕಿತ್ತು ಎಂದು ಪ್ರಶ್ನೆ ಮಾಡಿದರು.
Advertisement
ಚುನಾವಣಾ ದೃಷ್ಟಿಯಿಂದ ಸಿಎಎ ಜಾರಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದಕ್ಕೆ ಯಾವುದೇ ರಾಕೆಟ್ ಸೈನ್ಸ್ ಬೇಕಿಲ್ಲ. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ : ಪ್ರತಾಪ್ ಸಿಂಹ
Advertisement
ಸರ್ಕಾರದ ಮಟ್ಟದಲ್ಲಿ ಇನ್ನೂ ಜಾರಿ ಬಗ್ಗೆ ಚರ್ಚೆ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರವಾಸದಲ್ಲಿದ್ದು, ನಾಳೆ ಕ್ಯಾಬಿನೆಟ್ ಸಭೆಯಿದೆ. ಬಾಂಗ್ಲಾದೇಶ, ಬೇರೆ ದೇಶದಿಂದ ಬಂದವರನ್ನ ಗುರುತಿಸಿ ವಾಪಸ್ ಕಳಿಸುತ್ತಿದ್ದೇವೆ. ಪಾಸ್‌ಪೋರ್ಟ್ ಇಲ್ಲದಿದ್ದರೆ ಅವರನ್ನು ವಾಪಸ್ ಕಳುಹಿಸುತ್ತಿದ್ದೇವೆ ಎಂದರು.