ಕಾರವಾರ: ಪಾರ್ಶ್ವವಾಯುವಿಗೆ (Paralysis) ಚಿಕಿತ್ಸೆ ನೀಡುವ ಆಸ್ಪತ್ರೆಯ ವೈದರು ಆರೋಗ್ಯವಾಗಿದ್ದ ಮಹಿಳೆಗೆ ಪಾರ್ಶ್ವವಾಯು ಬಾರದಂತೆ ಇಂಜೆಕ್ಷನ್ (Injection) ನೀಡಿ ಆಕೆಯ ಸಾವಿಗೆ ಕಾರಣವಾದ ಆಘಾತಕಾರಿ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar) ತಾಲೂಕಿನ ಹಳಗ ಗ್ರಾಮದ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಕೊಪ್ಪಳ ಮೂಲದ ಚಾರ್ಟೆಡ್ ಅಕೌಂಟೆಂಟ್ ಸ್ವಪ್ನ ರಾಯ್ಕರ್ (32) ಮೃತ ಮಹಿಳೆ. ಈಕೆಯ ತಂದೆ ಕೇಶವ್ ಪಾಶ್ವವಾಯುವಿಗೆ ಇಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ತಮ್ಮ ಕುಟುಂಬದವರಿಗೆ ಮೈ-ಕೈ ನೋವು ಇರಿವುದರಿಂದ ಸ್ವಪ್ನ ಸೇರಿ 4 ಜನ ಆಸ್ಪತ್ರೆ ವೈದ್ಯರ ಸಲಹೆ ಪಡೆದು ಪಾರ್ಶ್ವವಾಯು ಬಾರದಂತೆ ಇಂಜೆಕ್ಷನ್ ಪಡೆದಿದ್ದಾರೆ. ಚುಚ್ಚುಮದ್ದು ಪಡೆದ 3 ಜನರಿಗೆ ಏನೂ ಆಗದೆ ಸ್ವಪ್ನ ಮಾತ್ರ ಇಂಜೆಕ್ಷನ್ ಪಡೆದ ಕೆಲವೇ ನಿಮಿಷಗಳಲ್ಲಿ ಮೃತರಾಗಿದ್ದಾರೆ.
Advertisement
Advertisement
ಪಾರ್ಶ್ವವಾಯುವಿಗೆ ಮಾತ್ರ ಈ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲಾಗುತ್ತಿದ್ದು, ಪ್ರತಿ ಇಂಜೆಕ್ಷನ್‌ಗೆ ಕೇವಲ 150 ರೂ. ತೆಗೆದುಕೊಳ್ಳಲಾಗುತ್ತಿದೆ. ರಾಜ್ಯ, ಹೊರ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಲು ಜನರು ಬರುತ್ತಾರೆ. ಈ ಹಿಂದೆ ಈ ಆಸ್ಪತ್ರೆ ವಿರುದ್ಧ ಸಾಕಷ್ಟು ದೂರುಗಳಿದ್ದರೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿರಲಿಲ್ಲ. ಇದನ್ನೂ ಓದಿ: ಎಮ್ಮೆಗಳ ಜೊತೆ ಸೇರಲು ಬಿಡದಿದ್ದಕ್ಕೆ ಮಾಲೀಕನನ್ನೇ ಇರಿದು ಕೊಂದ ಕೋಣ
Advertisement
Advertisement
ವಿದ್ಯಾವಂತರಾಗಿದ್ದರೂ ಮುಂದೆ ತಂದೆಗೆ ಆದ ಪಾರ್ಶ್ವವಾಯು ತನಗೂ ಬರಬಹುದು ಎಂಬ ಭಯ ಹಾಗೂ ವೈದ್ಯರ ನಿರ್ಲಕ್ಷ ಸ್ವಪ್ನ ಅವರ ಸಾವಿಗೆ ಕಾರಣವಾದರೆ 3 ವರ್ಷದ ಅವರ ಮಗು ಅನಾಥವಾಗಿದೆ. ಘಟನೆ ಸಂಬಂಧ ಕಾರವಾರದ ಚಿತ್ತಾಕುಲ ಠಾಣೆಯಲ್ಲಿ ಮೃತ ಮಹಿಳೆ ಸಂಬಂಧಿಕರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬೀದರ್ ಪೊಲೀಸರ ಕಾರ್ಯಾಚರಣೆ – 7 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ