ಬೆಂಗಳೂರು: ಭವಾನಿ (Bhavani Revanna) ಅವರಿಗೆ ಬಿಜೆಪಿ (BJP) ಸೇರಲು ಆಹ್ವಾನಿಸಿದ್ದು ತಮಾಷೆಗೆ. ಅವರಿಗೆ ಹಾಸನ (Hassan) ಸುರಕ್ಷಿತ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಸ್ಪಷ್ಟಪಡಿಸಿದ್ದಾರೆ.
ನಾನು ಹೇಳಿದ್ದು ತಮಾಷೆಗೆ, ಸೀರಿಯಸ್ ಆಗ್ಬೇಡಿ. ಇದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಇವತ್ತಿನ ವರ್ಷನ್. ಭವಾನಿ ರೇವಣ್ಣ ವರ್ಸಸ್ ಹೆಚ್.ಪಿ.ಸ್ವರೂಪ್ ಮಧ್ಯೆ ನಡೆಯುತ್ತಿರುವ ಜೆಡಿಎಸ್ ಟಿಕೆಟ್ ಫೈಟ್ ಬಗ್ಗೆ ನಿನ್ನೆಯಷ್ಟೇ ಹಾಸನದಲ್ಲಿ ಮಾತಾಡಿದ್ದ ಸಿ.ಟಿ.ರವಿ, ಭವಾನಿ ರೇವಣ್ಣ ಅವರನ್ನು ಬಿಜೆಪಿಗೆ ಆಹ್ವಾನ ಕೊಟ್ಟಿದ್ರು. ಭವಾನಿ ರೇವಣ್ಣ ಅವರು ಒಪ್ಪಿದರೆ ಹೊಳೆನರಸೀಪುರದಲ್ಲಿ ಬಿಜೆಪಿ ಟಿಕೆಟ್ ಕೊಡೋದಾಗಿ ಸಿ.ಟಿ.ರವಿ ಹೇಳಿಕೆ ಕೊಟ್ಟಿದ್ರು. ಆದ್ರೆ ಇಂದು ಬೆಂಗಳೂರಿನಲ್ಲಿ ಮಾತಾಡಿರುವ ಸಿ.ಟಿ.ರವಿ, ನಾನು ಹೇಳಿದ್ದು ಶುದ್ಧ ತಮಾಷೆಗಾಗಿ. ಹಾಗಂತ ಅದನ್ನು ಗಂಭೀರವಾಗಿ ತೆಗೆದುಕೊಂಡು ಟಿಕೆಟ್ ಕೊಡಿ ಅಂತಾ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಭವಾನಿ ರೇವಣ್ಣ ನಾನೇ ಅಭ್ಯರ್ಥಿ ಅಂತಾರೆ, ಅವ್ರಿಗೇನು ಹೇಳೋರು ಕೇಳೋರಿಲ್ವಾ: ಈಶ್ವರಪ್ಪ ಪ್ರಶ್ನೆ
ಮುಂದುವರೆದು ಮಾತಾಡಿದ ಅವರು, ನಾನು ಹೇಳಿದ್ದು ತಮಾಷೆಗೆ. ಆದರೆ ನನ್ನನ್ನು ಮನೆ ಮುರುಕ ಎಂದು ಬಿಂಬಿಸುತ್ತಿದ್ದಾರೆ. ನನ್ನ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಭವಾನಿಯವರಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ಕೂಡ ನಡೆದಿಲ್ಲ. ನಾನು ಜೆಡಿಎಸ್ ಹೈಕಮಾಂಡ್ ಅಲ್ಲ, ಅವರ ಮನೆಯಲ್ಲಿಯೇ ಅವರ ಹೈಕಮಾಂಡ್ ಇದ್ದಾರೆ. ಕುಮಾರಸ್ವಾಮಿ ಬೇಕಾದರೆ ಇದು ಮನೆ ಜಗಳ ಎಂದು ಹೇಳಬಹುದು. ನಾನು ಹಾಗೆ ಹೇಳಕ್ಕಾಗಲ್ಲ ಅಂತ ಸಿ.ಟಿ.ರವಿ ಹೇಳಿದ್ದಾರೆ.
ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರ ಸುರಕ್ಷಿತವಲ್ಲ
ಭವಾನಿ ಅಕ್ಕ ಅವರಿಗೆ ಹಾಸನ ಕ್ಷೇತ್ರ ಸುರಕ್ಷಿತವಲ್ಲ ಎಂದು ಸಿ.ಟಿ.ರವಿ ಭವಿಷ್ಯ ನುಡಿದಿದ್ದಾರೆ. ಪ್ರೀತಂ ಗೌಡ ವಿರುದ್ಧ ಯಾರೇ ಸ್ಪರ್ಧಿಸಿದರೂ ಪ್ರೀತಂ ಗೆಲುವು ನಿಶ್ಚಿತ. ಹಾಸನದಲ್ಲಿ ಪ್ರೀತಂ ಕಡಿಮೆ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರೀತಂ ಜನಪ್ರಿಯತೆ ಇತ್ತೀಚೆಗೆ ಹೆಚ್ಚಾಗಿದೆ. ಜನರ ಬೆಂಬಲ ಪ್ರೀತಂ ಪರ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಭಯ ಹುಟ್ಟಿದೆ, ಹೀಗಾಗಿ ರಾಜ್ಯಕ್ಕೆ ಮೋದಿ-ಶಾರನ್ನು ಕರೆಸುತ್ತಿದ್ದಾರೆ : ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k