– ಪಿಎಫ್‌ಐ, ಎಸ್‌ಡಿಪಿಐ ಅವ್ರ ಕೇಸ್ ವಾಪಾಸ್ ಪಡೆದ್ರಲ್ಲ, ಅವ್ರೇನು ದೇಶ ಭಕ್ತರಾ?
– ಸುಹಾಸ್ ಶೆಟ್ಟಿ ಹತ್ಯೆಗೆ ಕಾಂಗ್ರೆಸ್‌ನ ಓಲೈಕೆ ರಾಜಕೀಯ ಕಾರಣ
ಬೆಂಗಳೂರು: ಕಾಂಗ್ರೆಸ್‌ನವ್ರು ದನಗಳ್ಳರು ಸತ್ತಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಪರಿಹಾರ ಕೊಟ್ಟಿದ್ರು ಎಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ(Suhas Shetty) ಮನೆಗೆ ಭೇಟಿ ಕೊಡದ ಕಾಂಗ್ರೆಸ್ ನಾಯಕರ ನಡೆಗೆ ಪರಿಷತ್ ಸದಸ್ಯ ಸಿ.ಟಿ ರವಿ(C T Ravi) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ(Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದನಗಳ್ಳರಾಗಿದ್ದ ಇದ್ರಿಸ್ ಪಾಷ ಹಾಗೂ ಕಬೀರ್ ಸತ್ತಾಗ ಕಾಂಗ್ರೆಸ್ ನಾಯಕರು(Congress Leaders) ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳಿ, ಒಬ್ರಿಗೆ 10 ಲಕ್ಷ ರೂ. ಇನ್ನೊಬ್ಬರಿಗೆ 25 ಲಕ್ಷ ರೂ. ಪರಿಹಾರವನ್ನೂ ಕೊಟ್ಟು ಬಂದ್ರು. ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಕೇಸ್‌ಗಳನ್ನು ವಾಪಸ್ ಪಡೆದ್ರಲ್ಲ, ಅವ್ರೇನು ದೇಶ ಭಕ್ತರಾಗಿದ್ರಾ? ಅವರ ಮೇಲೆ ದೊಂಬಿ ಗಲಭೆ, ಠಾಣೆಗೆ ಬೆಂಕಿ ಹಾಕಿದ ಕೇಸ್‌ಗಳಿವೆ. ಯಾರ್ಯಾರು ಯಾವ್ಯಾವ ಕಾರಣಕ್ಕೆ ರೌಡಿಶೀಟ್ ಓಪನ್ ಮಾಡಿದ್ದಾರೆ ಅಂತ ಬಿಚ್ಚಿ ಹೇಳಬೇಕಾ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ’ಡ್ರ್ಯಾಗನ್’ ಸಕ್ಸಸ್ ಬೆನ್ನಲ್ಲೇ ಸ್ಟಾರ್ ನಟನಿಗೆ ಕಯಾದು ಲೋಹರ್ ಜೋಡಿ
ಸುಹಾಸ್ ಶೆಟ್ಟಿ ಹತ್ಯೆ ನಂತರ ಸರ್ಕಾರ ಏನು ಕ್ರಮ ತಗೊಂಡಿದೆ. ಎಸ್‌ಡಿಪಿಐ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆಯುವಾಗ ದಿನೇಶ್ ಗುಂಡೂರಾವ್‌ಗೆ(Dinesh Gundu Rao) ಅವಮಾನ ಆಗಲಿಲ್ಲ? ಸುಹಾಸ್ ಶೆಟ್ಟಿ ರೌಡಿಶೀಟರ್ ಅನ್ನೋದು ಅವಮಾನನಾ ನಿಮಗೆ? ಯಾರ್ಯಾರು ರೌಡಿಶೀಟರ್‌ಗಳನ್ನಿಟ್ಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ಹೇಳಬೇಕಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಲಿಂಗಕಾಮಿ ಗೆಳೆಯನಿಗಾಗಿ ದೊಡ್ಡಮ್ಮನ ಮನೆಯಲ್ಲೇ ಕಳ್ಳತನ ಮಾಡಿದ್ದ ದತ್ತು ಪುತ್ರ ಅರೆಸ್ಟ್
ಸುಹಾಸ್ ಶೆಟ್ಟಿ ಹತ್ಯೆಗೆ ಕಾಂಗ್ರೆಸ್‌ನ ಓಲೈಕೆ ರಾಜಕೀಯ ಹಾಗೂ ಕಮ್ಯೂನಲ್ ರಾಜಕೀಯವೇ ಕಾರಣ. ಇದು ಕಮ್ಯೂನಲ್ ಸರ್ಕಾರ. ಕ್ರಿಮಿನಲ್‌ಗಳಿಗೆ ಬೆಂಬಲ ನೀಡುವ ಸರ್ಕಾರ ಎಂದು ಟೀಕಿಸಿದರು. ಇದನ್ನೂ ಓದಿ: ಉಗ್ರರ ದಾಳಿ ಬಗ್ಗೆ ಮೋದಿಗೆ ಮೊದಲೇ ಮಾಹಿತಿ ಇತ್ತು, ಅದಕ್ಕೆ ಕಾಶ್ಮೀರ ಭೇಟಿ ರದ್ದು ಮಾಡಿದ್ದರು: ಖರ್ಗೆ ಆರೋಪ
ಬಿಜೆಪಿ ಅವಧಿಯಲ್ಲಿ ಸುಹಾಸ್ ಶೆಟ್ಟಿ ಹೆಸರಿನಲ್ಲಿ ರೌಡಿಶೀಟ್ ಓಪನ್ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪ ಮಾಡಿದ್ದಾರೆ. ಈ ವಿಚಾರಗಳು ಸಚಿವರಿಗೆ ಅಥವಾ ಶಾಸಕರಿಗೆ ಗೊತ್ತೇ ಇರಲ್ಲ. ಎಷ್ಟೋ ಸಲ ಆರೋಪಿಗೇ ಈ ವಿಚಾರ ಗೊತ್ತಿರಲ್ಲ. ಪೊಲೀಸರು ಅವರ ದಾಖಲೆಗಾಗಿ ರೌಡಿಶೀಟ್ ಓಪನ್ ಮಾಡ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ಟಕ್ಕರ್ ಕೊಟ್ಟರು.