ಬೆಂಗಳೂರು: ಜೆಡಿಎಸ್ ಸೇರುತ್ತೇನೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಶೀಘ್ರದಲ್ಲಿಯೇ ದಿನಾಂಕ ತಿಳಿಸುತ್ತೇನೆ. ಹಣೆಯಲ್ಲಿ ಬರೆದಿದ್ದರೆ ಕುಮಾರಸ್ವಾಮಿ ಸಿಎಂ ಆಗೋದನ್ನ ಯಾರು ತಪ್ಪಿಸೋಕೆ ಆಗುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
Advertisement
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಾಗೂ ಕುಮಾರಸ್ವಾಮಿ ಒಂದು ಗುಣ ಅಂದರೆ ಯಾವತ್ತೂ ಡ್ಯಾಮ್‍ಗೆ ಡ್ಯಾಮೇಜ್ ಮಾಡಲ್ಲ. ಅಲ್ಲಿ ನೀರು ಸೋರುತ್ತಿದ್ದರೆ ಬಕೆಟ್ ಹಿಡಿತಾರೆ. ಸೋರಿ ಹೋಗುವ ನೀರಿನಲ್ಲೆ ಬಕೆಟ್ ತುಂಬಿಸಿಕೊಳ್ತಾರೆ. ದಾವಣಗೆರೆಯಲ್ಲಿ ಜೆಡಿಎಸ್ ಸೇರುತ್ತೇನೆ. ಆದರೆ ದಿನಾಂಕ ಇನ್ನು ನಿಗದಿಯಾಗಿಲ್ಲ. ಹಣೆಯಲ್ಲಿ ಬರೆದಿದ್ದರೆ ಕುಮಾರಸ್ವಾಮಿ ಸಿಎಂ ಆಗೋದನ್ನ ಯಾರು ತಪ್ಪಿಸೋಕೆ ಆಗುತ್ತದೆ ಎಂದು ಕೇಳಿದ್ದಾರೆ. ಇದನ್ನೂ ಓದಿ: ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ
Advertisement
Advertisement
ಕರ್ನಾಟಕ ಸರ್ಕಾರ ವಿವಾದಗಳ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿ ಇದೆ. ಯಾವುದೆ ವಿವಾದ ಸೃಷ್ಟಿ ಮಾಡಿದರೂ ಸಕ್ಸಸ್ ಆಗುತ್ತಿಲ್ಲ. ಗೋಹತ್ಯೆ, ಧಾರ್ಮಿಕ ಬಿಲ್ ತಂದರು. ಅದು ಅಲ್ಲೇ ನಿಂತಿದೆ. ಈಗ ಹಿಜಬ್ ವಿವಾದ ತಂದಿದ್ದಾರೆ. ಹಿಜಬ್ ಅನಾದಿಕಾಲದಿಂದಲೂ ಇದೆ. ಮೈಸೂರು ಮಹಾರಾಜರು ಅಂದಿನ ಶಾಲಾ ಕಾಲೇಜಿಗೆ ಹೆಣ್ಣುಮಕ್ಕಳು ಹೋಗುವ ಗಾಡಿಗೆ ಪರದೆ ಹಾಕಿದ್ದರು. ಹೆಣ್ಣು ಮಕ್ಕಳಿಗೆ ಪರದೆ ಅಲ್ಲದೆ ಗಾಡಿಗೂ ಪರದೆ ಹಾಕಿದ್ದರು. ಉತ್ತರ ಕರ್ನಾಟಕದಲ್ಲಿ ತಲೆ ಮೇಲೆ ಸೆರಗು ಹಾಕದ ಹೆಣ್ಣು ಮಕ್ಕಳು ಸಿಗಲ್ಲ. ಅದು ಅವರ ಸಂಸ್ಕೃತಿಯಾಗಿದೆ. ತಲೆ ಮೇಲೆ ಬಟ್ಟೆ ಹಾಕೋದು ಹಿಜಬ್, ಅದು ಬುರ್ಕ ಅಲ್ಲಾ. ಅಯ್ಯೋ ಹುಚ್ಚಮುಂಡೇವ ಕೋವಿಡ್‍ಗೆ ಹಾಕುವುದನ್ನೆ ಇವರು ಹಾಕಿದ್ದಾರೆ. ಬೊಮ್ಮಾಯಿನೇ ಹಿಜಬ್ ಹಾಕಿದ್ದಾನೆ, ಸಚಿವರು ಹಾಕಿದ್ದಾರೆ, ನಾನು ಹಾಕಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
ಹೆಣ್ಣು ಮಕ್ಕಳು ಮುಖಮುಚ್ಚಿಕೊಂಡರೆ ನಿಮಗೇನು ಸಮಸ್ಯೆ. ಮುಖ ನೋಡೋ ಆನಂದ ನಿಮಗ್ಯಾಕೆ. ಅವರು ಬ್ಯೂಟ್ ಕಂಟೆಸ್ಟ್‌ಗೆ ಬರುತ್ತಿಲ್ಲ. ಕೆಲವರು ಮುಸ್ಲಿಂ ಹೆಣ್ಣುಮಕ್ಕಳು ಹಿಜಬ್ ಹಾಕಲ್ಲ. ಅವರಿಗೆ ಹಾಕಿ ಅಂತ ಒತ್ತಾಯ ಮಾಡಲ್ಲ. ಹಾಕುವವರನ್ನ ಯಾಕೆ ತಡೆಯುತ್ತೀರಾ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಇಬ್ರಾಹಿಂಗೆ ಖಾದರ್ ಸರಿಸಮಾನ ಅನ್ನೋದಾದರೆ, ಸಿದ್ದರಾಮಯ್ಯಗೆ ವಿಶ್ವನಾಥ್ ಸಮ. ಅವರನ್ನ ಸಿಎಂ ಮಾಡ್ತಾರಾ? ಡಿಕೆ ಶಿವಕುಮಾರ್‍ಗೆ ಕೃಷ್ಣ ಬೈರೇಗೌಡ ಪರ್ಯಾಯ ಅಲ್ವಾ ಹಾಗಾದರೆ, ಅವರು ಒಕ್ಕಲಿಗರೇ ಅಲ್ವಾ? ಅವರಿಗೊಂದು ನಮಗೊಂದು ನ್ಯಾಯನಾ? ನಾನು ಸೆಂಟ್ರಲ್ ಮಿನಿಸ್ಟರ್ ಆದಾಗ ಕೇಂದ್ರದಲ್ಲಿ ಇದ್ದಾಗ ಟಿಕೆಟ್ ಕೇಳೋಕೆ ನನ್ನ ಹತ್ತಿರ ಬಂದಿದ್ದರು. ನಾನು ಭಾಷಣ ಮಾಡುತ್ತಿದ್ದರೆ ಮೋಟರ್ ಸೈಕಲ್‍ನಲ್ಲಿ ಬಂದು ನನ್ನ ಭಾಷಣ ಕೇಳಿ ಹೋಗ್ತಿದ್ದರು ಸಿದ್ದರಾಮಯ್ಯ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ
ನಾನು ಸಾಕಷ್ಟು ಕಡೆ ರಾಜಕೀಯ ಸಭೆ ಮಾಡುತ್ತಿದ್ದೇನೆ. ಜನತಾದಳ ಬಗ್ಗೆ ಜಾಸ್ತಿ ಒಲವು ಕಂಡು ಬರುತ್ತಿದೆ. ಧಾರ್ಮಿಕ ನಾಯಕರುಗಳು ಬೆಂಬಲಿಸಿದ್ದಾರೆ. ಕಾಂಗ್ರೆಸ್‍ಗೆ ಮುಸ್ಲಿಮರು ಓಟ್ ಬ್ಯಾಂಕ್ ಅಲ್ಲಾ. ನಮಗೂ ಬೇರೆ ಆಯ್ಕೆ ಇದೆ ಎಂದಿದ್ದಾರೆ. ಅಲಿಂಗ ಅಲ್ಪ ಸಂಖ್ಯಾತರು, ಲಿಂಗಾಯತರು, ದಲಿತರು, ಒಕ್ಕಲಿಗರು, ಬ್ರಾಹ್ಮಣರನ್ನ ತಬ್ಬಿಕೊಳ್ಳುವುದೇ ಅಲಿಂಗ ಚಳುವಳಿ. ಎಲ್ಲರನ್ನ ಒಟ್ಟಿಗೆ ತರುವುದೆ ಈ ಚಳುವಳಿಯಾಗಿದೆ.
ಪೊಸಿಶನ್ ಸಿದ್ದರಾಮಯ್ಯಗೆ ಸಿಕ್ತು, ನಮಗಲ್ಲ. ಯಡಿಯೂರಪ್ಪಗೆ ಕರೆ ಮಾಡಿದ್ದೆ, ಮಾತನಾಡಿದ್ದೇನೆ ಆದರೆ ಭೇಟಿಯಾಗಿಲ್ಲ. ಜೆಡಿಎಸ್ ಕಾಂಗ್ರೆಸ್ ನಾಯಕರು ಅಲಿಂಗ ಭಾಗವಾಗಿರುತ್ತಾರೆ. ಫೆಬ್ರವರಿ 14 ಹುಬ್ಬಳ್ಳಿ ಸಭೆ ನಂತರ ಜೆಡಿಎಸ್ ಸೇರ್ಪಡೆ ದಿನಾಂಕ ಘೋಷಣೆ ಮಾಡುತ್ತೇನೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನಿಸಿದ್ದೇನೆ. ಧಾರ್ಮಿಕ ಬಿಲ್‍ಗೆ ನನ್ನಿಂದಾಗಿ ಹಿನ್ನಡೆ ಆಗಬಾರದು ಅಂತ ಸಧ್ಯಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಾನು ಅಲ್ಲಾಡಿದ್ದಕ್ಕೆ ನಲಪಾಡ್‍ಗೆ ಅಧ್ಯಕ್ಷ ಸ್ಥಾನ ಖಾದರ್‍ಗೆ ಉಪ ನಾಯಕ ಸ್ಥಾನ ಸಿಕ್ಕಿದೆ. ನಾನು ಬಿಟ್ಟರೆ ಇನ್ನು ಕೆಲವರಿಗೆ ಅವಕಾಶ ಸಿಗುತ್ತೆ ಎಂದಿದ್ದಾರೆ.
ಮಾರ್ಚ್ 10ರ ನಂತರ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿರುತ್ತೆ. ಜೆಡಿಎಸ್ ಮೊದಲನೇ ಸ್ಥಾನಕ್ಕೆ ಬರುತ್ತದೆ. ಬಿಜೆಪಿ ಎರಡನೇ ಸ್ಥಾನಕ್ಕೆ ಬರುತ್ತೆ. 2023 ರವರೆಗೆ ಕಾದು ನೋಡಿ. ಕಾಂಗ್ರೆಸ್ ನವರು ನನ್ನ ಬಳಿ ಬರುತ್ತಾರೆ. ಸಮಾಜ ಒಡೆಯುವ ರಾಜಕಾರಣ ಮಾಡಿಲ್ಲ. ಮುಸ್ಲಿಂ ಸಮುದಾಯದ ಎರಡರಷ್ಟು ಬೇರೆ ಸಮಾಜವೂ ನನ್ನ ಮೇಲೆ ವಿಶ್ವಾಸ ಇರಿಸಿದೆ. ನಾಲ್ಕು ದಿನ ರೆಸ್ಟ್ ತೆಗೊಂಡು ಬಂದರು. ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ಸಂತೋಷವಾಗಿಲ್ಲ. ಜೊತೆಗೆ ಮಾತನಾಡಿದ ಪಟ್ಟಣ್‍ಗೆ ನೋಟಿಸ್ ಕೊಟ್ಟರು. ಉಗ್ರಪ್ಪ ಎಲ್ಲಿದ್ದಾರೆ ಎಂದು ಗೊತ್ತಿಲ್ಲ. ಅಲ್ಲೊಂದು ಕಾಲು ಇಲ್ಲೊಂದು ಕಾಲು ಆಗಿದೆ ಎಂದು ಹೇಳಿದ್ದಾರೆ.