ಗದಗ: ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಕಾರ್ಯಕ್ರಮಕ್ಕೆ ಬಂದಿಲ್ಲ ಬದಲಿಗೆ ಡಿಕೆಶಿ- ಸಿದ್ದರಾಮಯ್ಯರನ್ನ (Siddaramaiah) ಜೋಡಿಸಲು ಬಂದಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ (Byrathi Basavaraj) ವ್ಯಂಗ್ಯವಾಡಿದರು.
ಓಬಿಸಿ ಸಮಾವೇಶ ಪೂರ್ವಭಾವಿ ಸಭೆಗೆ ಆಗಮಿಸಿದ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಭಾರತ ಜೋಡಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಪ್ರಧಾನಿ ಮೋದಿ ಅವರು ವಿಶ್ವ ಮಟ್ಟದಲ್ಲಿ ಭಾರತ ಹೆಸರು ಮಾಡಿ ಜೋಡಿಸುತ್ತಿದ್ದಾರೆ ಎಂದ ಅವರು, ನಮ್ಮ ಪಕ್ಷದ ಮೇಲೆ 40% ಕಾಂಗ್ರೆಸ್ ಆರೋಪ ಸರಿಯಲ್ಲ. ರಾಹುಲ್ ಗಾಂಧಿ, ಅವರ ತಾಯಿ, ಸಹಚರರು ಬೇಲ್‌ನಲ್ಲಿದ್ದಾರೆ ನೆನಪಿರಲಿ ಎಂದು ಹೇಳಿದರು.
Advertisement
Advertisement
ಈ ವೇಳೆ ರಾಜ್ಯ ಕಾಂಗ್ರೆಸ್ (Congress) ನಾಯಕರ ವಿರುದ್ಧ ಸಹ ಹರಿಹಾಯ್ದ ಅವರು, ನಿಮ್ಮ ಅಧಿಕಾರದಲ್ಲಿ ಏನು ಮಾಡಿದ್ದಿರಿ ತಿರುಗಿ ನೋಡಿ? ಶಿಕ್ಷಣ ಇಲಾಖೆ ಹಾಗೂ ಅರ್ಕಾವತಿ ಏನಾಗಿದೆ ಎಂದು ಪ್ರಶ್ನಿಸಿದರು. ಪೇಸಿಎಂ ಟೀ ಶರ್ಟ್ ಹಾಕಿದ ಕೂಡಲೇ ರಾಜ್ಯದ ಜನತೆ ಅವರ ಕಡೆ ಹೋಗುತ್ತಾರೆ ಎಂಬುದು ಭ್ರಮೆ ಎಂದು ಕಿಡಿಕಾರಿದರು.
Advertisement
Advertisement
ಸಿಪಿ ಯೋಗೇಶ್ವರ್- ಹೆಚ್‌ಡಿಕೆ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ. ಕುಮಾರಸ್ವಾಮಿಯನ್ನು ಈ ವಿಚಾರವಾಗಿ ಖಂಡಿಸುತ್ತೇನೆ. ಮಾಜಿ ಸಿಎಂ ಆಗಿ, ಅಭಿವೃದ್ಧಿ ವಿಚಾರದಲ್ಲಿ ಹೀಗೆ ಮಾಡುವುದು ಸರಿಯಲ್ಲ. ಅಭಿವೃದ್ಧಿಯೇ ಬೇರೆ ರಾಜಕಾರಣವೇ ಬೇರೆ. ಬಿಜೆಪಿ ಯಾವಾಗಲೂ ಸಿಪಿವೈ ಹಿಂದಿದೆ. ಅವರನ್ನು ನಾವ್ಯಾರೂ ಬಿಟ್ಟುಕೊಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಿಎಫ್‌ಐ ಕಾರ್ಯಕರ್ತರಿಗೆ 3 ಹಂತದ ತರಬೇತಿ – ಹಿಂದೂ ಹೆಸರಿನಲ್ಲಿ ಹಾಲ್ ಖರೀದಿಸಿ, ದಾನ
ಇನ್ನು ಆರ್‌ಎಸ್‌ಎಸ್ ಬ್ಯಾನ್ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್ ದೇಶಭಕ್ತಿ ಸಂಸ್ಥೆ. ದೇಶಭಕ್ತಿ ಸಂಸ್ಥೆ ಬ್ಯಾನ್ ಮಾಡುವಂತೆ ಹೇಳುವವರ ತಲೆ ಸರಿ ಇದೆಯಾ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಖಾದಿ ಎಂಪೋರಿಯಂನಲ್ಲಿ ಲೇಡಿಸ್ ಟಾಪ್ ಡ್ರೆಸ್ ಖರೀದಿಸಿದ ಸಿಎಂ
ಪಿಎಫ್‌ಐ ದೇಶ ದ್ರೋಹ ಮಾಡುವ ಸಂಘಟನೆಯಾಗಿದೆ. ನಮ್ಮ ದೇಶದ ಅನ್ನ, ನೀರು, ಗಾಳಿ ಕುಡಿದು ದೇಶಕ್ಕೆ ಮಾರಕವಾಗುವುದು ಎಷ್ಟು ಸರಿ? ವೋಟ್ ಬ್ಯಾಂಕ್ ರಾಜಕಾರಣ ಬಿಡಿ, ದೇಶ ಉಳಿಸುವ ಕೆಲಸ ಮಾಡಿ ಎಂದ ಅವರು, ಭಾರತ್ ಜೋಡೋ ಕಾರ್ಯಕ್ರಮಕ್ಕೆ ಹಾಕಿದ ಬ್ಯಾನರ್, ಫ್ಲೆಕ್ಸ್‌ಗಳನ್ನು ನಮ್ಮವರು ಯಾರೂ ಹರಿದಿಲ್ಲ. ಕಾಂಗ್ರೆಸ್‌ನವರೇ ಹರಿದು, ಇಲ್ಲ ಸಲ್ಲದ ವಿವಾದ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.