ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ (Congress Govt) ಸ್ತ್ರೀ ಪೀಡಕರು, ದುರುಳರು, ಅತ್ಯಾಚಾರಿಗಳ ಅಟ್ಟಹಾಸ ವಿಪರೀತಕ್ಕೆ ಹೋಗುತ್ತಿದೆ. ಇಷ್ಟಾದರೂ ಈ ಬಗ್ಗೆ ಗಂಭೀರತೆ ಪ್ರದರ್ಶಿಸದೇ ಉಡಾಫೆ ಧೋರಣೆ ಅನುಸರಿಸುತ್ತಿರುವ ಪರಿ ನೋಡಿದರೆ ‘ಸರ್ಕಾರವೇ ಸ್ತ್ರೀ ಕುಲ ಪೀಡಕರ ರಕ್ಷಣೆಗೆ’ ನಿಂತಿರುವ ಅನುಮಾನ ಮೂಡಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಕಿಡಿ ಕಾರಿದ್ದಾರೆ.
ರಾಜ್ಯದ @INCKarnataka ಸರ್ಕಾರದಲ್ಲಿ ಸ್ತ್ರೀ ಪೀಡಕರು, ದುರುಳರು, ಅತ್ಯಾಚಾರಿಗಳ ಅಟ್ಟಹಾಸ ವಿಪರೀತಕ್ಕೆ ಹೋಗುತ್ತಿದೆ. ಸರಣೀ ರೂಪದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ.
ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆಟೋ ದಲ್ಲಿ ಹೋಗುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅತ್ಯಂತ ಹೇಯ ಹಾಗೂ ರಾಕ್ಷಸೀ… pic.twitter.com/mYLLr7Ev58
— Vijayendra Yediyurappa (@BYVijayendra) August 18, 2024
ಬೆಂಗಳೂರಿನ (Bengaluru) ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಬಂಡೆ ಅನ್ನೋದೇ ಡೇಂಜರ್ – ಸಿದ್ದರಾಮಯ್ಯ ಸ್ಥಿತಿಗೆ ಪರೋಕ್ಷವಾಗಿ ಡಿಕೆಶಿ ಕಾರಣ ಎಂದ ಹೆಚ್‍ಡಿಕೆ
ವಿಜಯೇಂದ್ರ ಎಕ್ಸ್ ಖಾತೆಯಲ್ಲಿ ಏನಿದೆ?
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸ್ತ್ರೀ ಪೀಡಕರು, ದುರುಳರು, ಅತ್ಯಾಚಾರಿಗಳ ಅಟ್ಟಹಾಸ ವಿಪರೀತಕ್ಕೆ ಹೋಗುತ್ತಿದೆ. ಸರಣೀ ರೂಪದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿರ್ದೋಷಿಯಾಗಿ ಮತ್ತೆ ಸಿಎಂ ಆಗಲಿ: ಸುರೇಶ್ ಬಾಬು
ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆಟೋ ದಲ್ಲಿ ಹೋಗುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅತ್ಯಂತ ಹೇಯ ಹಾಗೂ ರಾಕ್ಷಸೀ ಕೃತ್ಯವಾಗಿದೆ. ಮರುಕಳಿಸುತ್ತಲೇ ಇರುವ ಇಂತಹ ಘಟನೆಗಳಿಂದ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಘನತೆ ಕುಗ್ಗುತ್ತಿದೆ. ಇದನ್ನೂ ಓದಿ: ನನ್ನ ವಿರುದ್ಧದ ಕೇಸ್ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ಬೇಡ: ಕುಮಾರಸ್ವಾಮಿ
ಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಯಾರೊಬ್ಬರೂ ಈ ಬಗ್ಗೆ ಗಂಭೀರತೆ ಪ್ರದರ್ಶಿಸದೇ ಉಡಾಫೆ ಧೋರಣೆ ಅನುಸರಿಸುತ್ತಿರುವ ಪರಿ ನೋಡಿದರೆ ‘ಸರ್ಕಾರವೇ ಸ್ತ್ರೀ ಕುಲ ಪೀಡಕರ ರಕ್ಷಣೆಗೆ’ ನಿಂತಿರುವ ಅನುಮಾನ ಮೂಡಿಸುತ್ತಿದೆ. ತಕ್ಷಣವೇ ಯುವತಿಯ ರಕ್ಷಣೆಗೆ ಮುಂದಾಗಿ ಪೈಶಾಚಿಕ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.