ಚಿತ್ರದುರ್ಗ: ಭಾರತ ಕ್ರಿಕೆಟ್ ತಂಡಕ್ಕೆ ಮಹೇಂದ್ರಸಿಂಗ್ ಧೋನಿ ಬಳಿಕ ರೋಹಿತ್ ನಾಯಕತ್ವ ವಹಿಸಿಕೊಂಡು ಹಿಟ್ ಮ್ಯಾನ್ ಆಗಿರುವಂತೆ ಬಿಜೆಪಿಗೂ ವಿಜಯೇಂದ್ರ (BY Vijayendra) ಹಿಟ್ ಮ್ಯಾನ್ (Hit Man) ಆಗಲಿದ್ದಾರೆ ಎಂದು ಬಿಜೆಪಿ (BJP) ಶಾಸಕ ಶ್ರೀರಾಮುಲು (B Sriramulu) ಭವಿಷ್ಯ ನುಡಿದಿದ್ದಾರೆ.
ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿವೈ ವಿಜಯೇಂದ್ರ ಪರ ಬ್ಯಾಟ್ ಬೀಸಿದರು. ವಿಧಾನಸಭೆ ಚುನಾವಣೆ (Assembly Election) ಸೋತ ಬಳಿಕ ಪಕ್ಷವು ವಿಜಯೇಂದ್ರಗೆ ಅವಕಾಶ ನೀಡಿದೆ. ಹೀಗಾಗಿ 30 ವರ್ಷಗಳಿಂದ ನಾನು ವಿಜಯೇಂದ್ರ ಅವರನ್ನು ನೋಡಿದ್ದು, ಯುವಕರಿಗೆ ಭವಿಷ್ಯದಲ್ಲಿ ಅವಕಾಶ ಸಿಗಬೇಕು. ಹೀಗಾಗಿ ಪಕ್ಷವು ಹಂತ ಹಂತವಾಗಿ ಗುರುತಿಸಿ ಅವಕಾಶ ನೀಡಿದೆ ಹೊರತು ಬಿಎಸ್ ಯಡಿಯೂರಪ್ಪ (BS Yediyurappa) ಅವರ ಮಗ ಅಂತ ಜವಾಬ್ದಾರಿ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗ್ಯಾರಂಟಿಗಳ ಅನುಷ್ಠಾನದ ಚರ್ಚೆಗೆ ರೆಡಿ – ಸಿಎಂಗೆ ಹೆಚ್‍ಡಿಕೆ ಸವಾಲ್
Advertisement
Advertisement
ವಿಜಯೇಂದ್ರ ಅವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶ ಇದೆ. ಇಂತಹ ವೇಳೆ ಪಕ್ಷ ಜವಾಬ್ದಾರಿ ನೀಡಿದೆ. ವಿಜಯೇಂದ್ರಗೆ ಶುಭವಾಗಲಿ ಎಂದು ಹಾರೈಸಿದರು. ಇನ್ನು ರಾಜ್ಯದ ಕಾಂಗ್ರೆಸ್ ನಾಯಕರು ಲೋಕಸಭಾ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ-ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸುತ್ತೇವೆ ಎಂದಿದ್ದಾರೆ. ಆದರೆ ಡಿಕೆಶಿ ಅವರು ಹಗಲುಗನಸು ಕಾಣುತ್ತಿದ್ದಾರೆ. ಹಾಗೆಯೇ ಇನ್ನು ನಾಲ್ಕೈದು ತಿಂಗಳಲ್ಲಿ ಕಾಂಗ್ರೆಸ್‌ನ (Congress) ಅಸಲಿ ಬಣ್ಣ ಜನರಿಗೆ ತಿಳಿಯಲಿದೆ. ಬಿಜೆಪಿ ಪಕ್ಷ ಕೂಡ 4-5 ತಿಂಗಳಲ್ಲೇ ಅಸಲಿ ದರ್ಶನ ಕೊಡುತ್ತದೆ. ಕಾಂಗ್ರೆಸ್ ಗ್ಯಾರಂಟಿ ಕೊಟ್ಟ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದರು. ಇದನ್ನೂ ಓದಿ: ನೆಹರು ಅವರ ಗಾಂಧಿ ಕುಟುಂಬ ಇರಬಾರದು ಎಂದು ಬಿಜೆಪಿ ಏನೇನೋ ಮಾಡಲು ಹೊರಟಿದೆ: ಡಿಕೆಶಿ ಕಿಡಿ
Advertisement
ಮುಂಬರುವ ಲೋಕಸಭೆ ಚುನಾವಣೆ ಆ ರೀತಿ ಆಗುವುದಿಲ್ಲ. ನಮ್ಮ ರಾಜ್ಯದಿಂದ ದೊಡ್ಡ ಶಕ್ತಿಯಾಗಿ ಸಂಸದರನ್ನು ಕಳುಹಿಸುತ್ತೇವೆ ಎಂದರು. ವಿಜಯೇಂದ್ರಗೆ ಜವಾಬ್ದಾರಿಯಿಂದಾಗಿ ಬಿಜೆಪಿ ನಾಯಕರ ಅಸಮಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಕೆಲವೊಮ್ಮೆ ಮನುಷ್ಯನ ವರ್ಚಸ್ಸಿನ ಮೇಲೆ ಕುರ್ಚಿಗೆ ಬೆಲೆ ಬರುತ್ತದೆ. ಕಿರಿಯರು, ಹಿರಿಯರು ಎಂಬ ಪ್ರಶ್ನೆ ಬರುವುದಿಲ್ಲ. ಈ ರಾಜ್ಯದ ಯುವಕರು ಹಾಗೂ ಹಿರಿಯರನ್ನು ಒಗ್ಗೂಡಿಸಲು ವಿಜಯೇಂದ್ರಗೆ ಪಕ್ಷದ ವರಿಷ್ಠರು ಹೊಣೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದೀಪಾವಳಿಗೆ ಕರೆಂಟ್ ಕಳ್ಳತನ – ಬೆಸ್ಕಾಂ ನೋಟಿಸ್ ನೀಡಲಿ, ದಂಡ ಕಟ್ಟುತ್ತೇನೆ ಎಂದ ಹೆಚ್‌ಡಿಕೆ
Advertisement
ನಾಯಕರಾದ ಸಿ.ಟಿ ರವಿ, ಯತ್ನಾಳ್, ಸೋಮಣ್ಣ, ಲಿಂಬಾವಳಿ ಸೇರಿದಂತೆ ನಾವೆಲ್ಲರೂ ಒಂದು ಕುಟುಂಬ ಎಂದು ಸಮರ್ಥಿಸಿಕೊಂಡ ಅವರು, ಯಾರು ಸಹ ಪಕ್ಷ ಬಿಡಲ್ಲ ಎಂದರು. ಅದರಲ್ಲೂ ವಿ.ಸೋಮಣ್ಣ ನೇರವಾಗಿ ಮಾತನಾಡುವಂತಹ ವ್ಯಕ್ತಿಯಾಗಿದ್ದು, ಅವರಲ್ಲಿಸಣ್ಣಪುಟ್ಟ ಭಿನ್ನಾಭಿಪ್ರಾಯವಿದ್ದರೆ ಸರಿ ಮಾಡುತ್ತೇವೆ. ಬೈ ಎಲೆಕ್ಷನ್ ವೇಳೆ ಸೋಮಣ್ಣನವರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಹೀಗಾಗಿ ಮುಂಬರುವ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲಿದ್ದು, ವಿಜಯೇಂದ್ರ ಅವರಿಗೆ ಮಾರ್ಗದರ್ಶನ ಮಾಡಿ ಪಕ್ಷ ಕಟ್ಟುತ್ತೇವೆ ಎಂದರು. ಈ ವೇಳೆ ಮಾಜಿ ಶಾಸಕ ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ ಉಪಸ್ಥಿತರಿದ್ದರು. ಇದನ್ನೂ ಓದಿ: ಹೆಚ್‌ಡಿಕೆ ನಿವಾಸಕ್ಕೆ ಅಕ್ರಮ ವಿದ್ಯುತ್ – ಮಾಜಿ ಸಿಎಂಗೆ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ ಎಂದ ಕಾಂಗ್ರೆಸ್