ರಾಯಚೂರು: ಎಲ್ಲಿ ಆತಂಕಗಳು ಹೆಚ್ಚಾಗುತ್ತೋ ಆಗ ಕ್ಷೇತ್ರ ಪರ್ಯಟನೆ, ಕ್ಷೇತ್ರ ಬದಲಾವಣೆ ನಡೆಯುತ್ತೆ, ಇದು ರಾಜಕೀಯದಲ್ಲಿ ಸಾಮಾನ್ಯ. ಎಂದು ಸಿದ್ದರಾಮಯ್ಯ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ (BY Raghavendra) ವ್ಯಂಗ್ಯವಾಡಿದರು.
ರಾಯಚೂರಿನಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರದಿಂದ (Kolar) ಸ್ಪರ್ಧಿಸುವುದು ಅವರ ವೈಯಕ್ತಿಕ ನಿರ್ಧಾರ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರೆ ಸ್ಟೆಬಿಲಿಟಿ ಇರುತ್ತಿತ್ತು ವರುಣದಲ್ಲಿ ಏನಾಯ್ತು, ಬಾದಾಮಿಯಲ್ಲಿ ಸ್ವಲ್ಪ ಎಡ್ಜ್‍ನಲ್ಲಿ ಗೆದ್ದರು. ಜನ ಚುನಾವಣೆ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
Advertisement
Advertisement
ಕಾಂಗ್ರೆಸ್ ನವರಿಗೆ ಸೋಲಿನ ಭಯವಿದೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಹೆಸರಲ್ಲಿ ಕಾಂಗ್ರೆಸ್ ಜೋಡೋ ಯಾತ್ರೆ ಮಾಡಿದ್ದಾರೆ. ಕಾಂಗ್ರೆಸ್ (Congress) ಪ್ರಾದೇಶಿಕ ಪಕ್ಷಕ್ಕಿಂತ ಕಡೆಯಾಗಿದೆ. ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗುತ್ತೆ ಎಂದು ವ್ಯಂಗ್ಯವಾಡಿದರು.
Advertisement
ಸಿದ್ದರಾಮಯ್ಯನವರ ಬಗ್ಗೆ ನಮಗೆಲ್ಲಾ ಗೌರವವಿದೆ. ಸುಮ್ಮನಿದ್ದವರನ್ನ ಏರಿಸುವಂತ ಕೆಲಸ ಅವರೇ ಮಾಡುತ್ತಾರೆ. ದಿನ ಬೆಳಗಾದರೆ ಬಿಜೆಪಿ ನಾಯಕರು, ಸರ್ಕಾರದ ಕೆಲಸ ಟೀಕೆ ಮಾಡದಿದ್ದರೆ ಅವರಿಗೆ ಸಮಧಾನವಾಗಲ್ಲ ಅನಿಸುತ್ತೆ. ಅವರು ಮುಗಿಬಿದ್ದಾಗ ಅವರಿಗೆ ಉತ್ತರ ಕೊಡುವಂತದ್ದು ನಮ್ಮ ಕರ್ತವ್ಯ. ಅದು ಬಿಟ್ಟರೆ ಅವರನ್ನ ವ್ಯಕ್ತಿಯಾಗಿಟ್ಟುಕೊಂಡು ಟಾರ್ಗೆಟ್ ಮಾಡುವ ಕೆಲಸ ನಾವು ಯಾರೂ ಮಾಡಲ್ಲ. ಗೌರವಪೂರ್ವಕವಾಗಿ ಒಂದು ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ನಾವು ಕೆಲಸ ಮಾಡುತ್ತೇವೆ ಎಂದು ಟೀಕಿಸಿದರು. ಇದನ್ನೂ ಓದಿ: ಎಲ್ಲೇ ಸ್ಪರ್ಧಿಸಿದ್ರೂ ಬಿಡಲ್ಲ ಅಂದ್ರು ಎಚ್‍ಡಿಕೆ – ಇತ್ತ ಬಿಜೆಪಿಯಿಂದಲೂ ಟಾರ್ಗೆಟ್ ಸಿದ್ದರಾಮಯ್ಯ!
Advertisement
ಸ್ವಲ್ಪ ಅಜೀರ್ಣ ಆದ ಸಂದರ್ಭದಲ್ಲಿ ತಾಕತ್ತು ಧಮ್ಮು ಪದಗಳು ಬರುತ್ತೆ. ಜನ ಮಾಲೀಕರು ಅವರು ತೋರಿಸುತ್ತಾರೆ ಅಂತ ಹೇಳಿದರು. ಯಾವುದೇ ದಾರ್ಶನಿಕರಿಗೆ ಅಗೌರವ ಮಾಡುವುದು ಸರಿಯಲ್ಲ. ಟಿಪ್ಪು ವಿಚಾರದಲ್ಲಿ ನಮ್ಮ ನಡೆ ಸ್ಪಷ್ಟವಾಗಿದೆ. ವೋಟಿಗೋಸ್ಕರ ನಾಡಪ್ರಭು ಕೆಂಪೆಗೌಡರ ಜೊತೆಗೆ ತುಲನೆ ಮಾಡುವ ಕೆಲಸ ನಡೆಯುತ್ತಿದೆ. ಇದು ಅಕ್ಷಮ್ಯ ಅಪರಾಧ ಯಾವುದೇ ಕಾರಣಕ್ಕೂ ಆ ತಪ್ಪನ್ನ ಮಾಡಬಾರದು. ಈಗ ಅಲ್ಲೊಂದು ಇಲ್ಲೊಂದು ಕಾಂಗ್ರೆಸ್ ಶಾಸಕ ಸ್ಥಾನ ಉಳಿದಿದೆ, ಅದು ಉಳಿಯದ ದುಸ್ಥಿತಿ ಬರುತ್ತೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮದುವೆಯಾಗಲು ಹುಡುಗಾಗಿ ಕ್ಯೂ ನಿಂತ ಮಂಡ್ಯ ಯುವ ರೈತರು