ನವದೆಹಲಿ: ದೇಶದ ನಾಲ್ಕು ರಾಜ್ಯಗಳ ಐದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ (By Election Result) ಫಲಿತಾಂಶ ಹೊರಬಿದ್ದಿದೆ. ಮಹಾರಾಷ್ಟ್ರದ (Maharashtra) ಕಸ್ಬಾ ಉಪಚುನಾವಣೆಯಲ್ಲಿ ಅಘಾಡಿ ಕೂಟದ ಕಾಂಗ್ರೆಸ್ (Congress) ಅಭ್ಯರ್ಥಿ ಗೆದ್ದಿದ್ದು, ಶಿಂಧೇ ನೇತೃತ್ವದ ಮಹಾರಾಷ್ಟ್ರ ಸರ್ಕಾರ ತೀವ್ರ ಮುಖಭಂಗ ಅನುಭವಿಸಿದೆ.
Advertisement
ಕಳೆದ 25 ವರ್ಷಗಳಿಂದ ಈ ಕ್ಷೇತ್ರ ಬಿಜೆಪಿ (BJP) ವಶದಲ್ಲಿಯೇ ಇತ್ತು. ಚಿಂದ್ವಾಡವನ್ನು ಮಾತ್ರ ಬಿಜೆಪಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಪಶ್ಚಿಮ ಬಂಗಾಳದ (West Bengal) ಸಾಗರ್‌ದಿಘೀ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಟಿಎಂಸಿ-ಬಿಜೆಪಿ ಕಾದಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ 22,980 ಮತಗಳ ಅಂತರದಿಂದ ಪ್ರಚಂಡ ಗೆಲುವು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ 1972ರಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ ಗೆದ್ದಿತ್ತು. 2021ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು ಎಂಬುದು ಗಮನಾರ್ಹ. ಇದನ್ನೂ ಓದಿ: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ – ಮೇಘಾಲಯ ಅತಂತ್ರ
Advertisement
Advertisement
ತಮಿಳುನಾಡಿನ (Tamil Nadu) ಈರೋಡ್ ಪೂರ್ವ ಕ್ಷೇತ್ರದಲ್ಲೂ ಡಿಎಂಕೆ ಬೆಂಬಲಿತ ಕಾಂಗ್ರೆಸ್ ಅಧ್ಯಕ್ಷ ಇವಿಕೆ ಇಳಂಗೋವನ್ 48 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಎಐಎಡಿಎಂಕೆ ಅಭ್ಯರ್ಥಿ ಹೀನಾಯ ಸೋಲು ಅನುಭವಿಸಿದ್ದಾರೆ. ಇಳಂಗೋವನ್ ಪರವಾಗಿ ಸ್ಟಾಲಿನ್ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದರು. ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣೆ – ಮಾ.4ಕ್ಕೆ ದಾವಣೆಗೆರೆಗೆ ದೆಹಲಿ ಸಿಎಂ
Advertisement
ಅರುಣಾಚಲದಲ್ಲಿ ಒಂದು ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ವಿರುದ್ಧ ಜಾರ್ಖಂಡ್ ಸ್ಟುಡೆಂಟ್ಸ್ ಯೂನಿಯನ್ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.