ಚೆನ್ನೈ: ದಿನದಿಂದ ದಿನಕ್ಕೆ ಈರುಳ್ಳಿ ದರದಲ್ಲಿ ಏರಿಕೆಯಾಗುತ್ತಿದ್ದು, ಇತ್ತ ತಮಿಳುನಾಡಿನ ಮೊಬೈಲ್ ಮಾರಾಟಗಾರರೊಬ್ಬರು ಇದನ್ನೇ ಬಂಡವಾಳ ಮಾಡಿಕೊಂಡು ಫೋನ್ ಸೇಲ್ ಮಾಡುತ್ತಿದ್ದಾರೆ.
ಹೌದು. ತಂಜಾವೂರು ಜಿಲ್ಲೆಯ ಪಟ್ಟುಕೊಟೈನ ತಲಯಾರಿ ಸ್ಟ್ರೀಟ್ ನಲ್ಲಿರುವ ಎಸ್ಟಿಆರ್ ಸರ್ವಿಸ್ ಸೆಂಟರಿನ ಮಾಲೀಕ, ಅಂಗಡಿಯಲ್ಲಿ ಮೊಬೈಲ್ ಕೊಂಡರೆ ಒಂದು ಕೆ.ಜಿ ಈರುಳ್ಳಿ ಉಚಿತವಾಗಿ ನೀಡುವುದಾಗಿ ಅನೌನ್ಸ್ ಮಾಡಿದ್ದಾರೆ. ತಮಿಳುನಾಡಿನಲ್ಲಿ ಸದ್ಯ ಈರುಳ್ಳಿ ಕೆ.ಜಿಗೆ 140 ರಿಂದ 160 ರೂ. ಇದೆ.
Advertisement
Advertisement
ಈ ಸಂಬಂಧ ಅಂಗಡಿ ಮಾಲೀಕ ಶರವಣ ಕುಮಾರ್ ಮಾತನಾಡಿ, ಇಂತಹ ಆಫರ್ ಗಳನ್ನು ಇಲ್ಲಿ ಯಾರೂ ಕೊಟ್ಟಿರಲಿಲ್ಲ. ಹೀಗಾಗಿ ಜನರಿಗೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಅಲ್ಲದೆ ನಾನು ಈ ರೀತಿ ಜಾಹೀರಾತನ್ನು ನೀಡಿದಾಗಿನಿಂದ ಸಾಕಷ್ಟು ಜನ ನನ್ನ ಅಂಗಡಿಗೆ ಬರುತ್ತಾನೇ ಇದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 500 ರೂ. ಫುಡ್ ಆರ್ಡರ್ ಮಾಡಿದ್ರೆ 1 ಕೆ.ಜಿ ಈರುಳ್ಳಿ ಉಚಿತ
Advertisement
8 ವರ್ಷಗಳ ಹಿಂದೆ ಪಟ್ಟುಕೊಟೈನಲ್ಲಿ ಶರವಣ ಕುಮಾರ್ ಎಸ್ ಟಿ ಆರ್ ಎಂಬ ಮೊಬೈಲ್ ಶಾಪ್ ಆರಂಭಿಸಿದ್ದರು. ಆ ಬಳಿಕದಿಂದ ದಿನದಲ್ಲಿ 2 ಮೊಬೈಲ್ ಗಳು ಮಾರಾಟವಾಗುತ್ತಿತ್ತು. ಇದೀಗ ಜಾಹೀರಾತು ಹಾಕಿದ ಬಳಿಕ ಅಂದರೆ ಗುರುವಾರ ಮತ್ತು ಶುಕ್ರವಾರ ಸುಮಾರು 8 ಮೊಬೈಲ್ ಗಳು ಮಾರಾಟವಾಗಿವೆ. ಹೀಗಾಗಿ ಜನ ನನ್ನ ಆಫರನ್ನು ಮೆಚ್ಚಿಕೊಂಡಿದ್ದಾರೆ ಎಂದು ನನಗನ್ನಿಸುತ್ತಿದೆ ಎಂದಿದ್ದಾರೆ. ಅಲ್ಲದೆ ಮೊಬೈಲ್ ತಗೊಂಡಾತ ಅವನಿಗೆ ಬೇಕಾದ ಈರುಳ್ಳಿ(ಸಣ್ಣ ಅಥವಾ ದೊಡ್ಡ) ಯನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಿದ್ದಾರೆ. ಇದನ್ನೂ ಓದಿ:ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ