ಬೆಂಗಳೂರು: ಫಾಲೋ ಮಾಡಿಕೊಂಡು ಬಂದು ನಡು ರಸ್ತೆಯಲ್ಲಿ ಥಳಿಸಿ ಲೇಡಿ ಡಾನ್ (Lady Don) ಉದ್ಯಮಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಅಖಿಲ್ ಅಲಿಯಾಸ್ ಹೇಮಾದ್ರಿ ಎಂಬ ಉದ್ಯಮಿ ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆ ನಡೆಸಿದ ವ್ಯಕ್ತಿಗಳಲ್ಲಿ ಒಬ್ಬನಾದ ಆರೋಪಿ ರೋನಿತ್ ಕಾರು ಬ್ಯಸಿನೆಸ್ ವಿಚಾರದಲ್ಲಿ ಉದ್ಯಮಿಗೆ ವಂಚನೆ ಮಾಡಿದ್ದ. ಈ ಹಿನ್ನೆಲೆ ಅಖಿಲ್ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ರೋನಿತ್‌ನನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ರೋನಿತ್ ಹೊರಗೆ ಬಂದಿದ್ದ. ಇದನ್ನೂ ಓದಿ: ಗ್ಯಾರಂಟಿ ಸಿಎಂ ಭಾಗ್ಯ ಕೊಡಿ – ಹೈಕಮಾಂಡ್ ಮುಂದೆ ಸಿದ್ದು, ಡಿಕೆಶಿ ವಾದ ಏನು?
Advertisement
Advertisement
ಉದ್ಯಮಿ ತನ್ನ ವಿರುದ್ಧ ದೂರು ನೀಡಿದ ಹಿನ್ನೆಲೆ ರೋನಿತ್ ಪದೇ ಪದೇ ಅಖಿಲ್‌ಗೆ ಬೆದರಿಕೆ ಹಾಕುತ್ತಿದ್ದು, ಸೇಡು ತೀರಿಸಿಕೊಳ್ಳುವ ಸಲುವಾಗಿ ಸಮಯಕ್ಕಾಗಿ ಕಾಯುತ್ತಿದ್ದ. ಅಖಿಲ್ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ರೋನಿತ್ ಮತ್ತು ಆತನ ಟೀಂ ಉದ್ಯಮಿಯನ್ನು ಫಾಲೋ ಮಾಡಿಕೊಂಡು ಬಂದು ಎಲ್ ಆಂಡ್ ಟಿ ಅಪಾರ್ಟ್ಮೆಂಟ್ ಬಳಿ ಅಡ್ಡ ಹಾಕಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ – ಮಳವಳ್ಳಿ ಬಿಜೆಪಿ ಪರಾರ್ಜಿತ ಅಭ್ಯರ್ಥಿ
Advertisement
Advertisement
ನಂತರ ಲೇಡಿ ಡಾನ್ ದುರ್ಗಾ ಅಲಿಯಾಸ್ ಸಹನಾ ಸೇರಿದಂತೆ ಐವರು ಸೇರಿ ಉದ್ಯಮಿ ಅಖಿಲ್ ಕಾರಿನಲ್ಲಿರುವಾಗಲೇ ಅವರ ಮೇಲೆ ಹಲ್ಲೆ ನಡೆಸಿ ಅವರ ಕಾರಿನ ಗ್ಲಾಸ್ ಒಡೆದು ಹಾಕಿದ್ದಾರೆ. ಬಳಿಕ ಅಖಿಲ್‌ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ: ಸುಧಾಕರ್ ಬಾಂಬ್