ಬೆಳಗಾವಿ: ಉದ್ಯಮಿ ಜಯಶೀಲ್ ಶೆಟ್ಟಿ (Jayasheel Shetty) ಅವರ ಸೊಸೆ ಶೀತಲ್ ಶೆಟ್ಟಿ ಗೋಕಾಕ್‍ನ (Gokak) ಘಟಪ್ರಭಾದಲ್ಲಿರುವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ನೇಣಿಗೆ ಶರಣಾಗಿದ್ದಾರೆ. ಕುಟುಂಬಸ್ಥರು ವಿದೇಶ ಪ್ರವಾಸದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಜಯಶೀಲ್ ಶೆಟ್ಟಿಯವರ ಪುತ್ರ ಮನಿಶ್ ಅವರನ್ನು ಶೀತಲ್ ಮದುವೆಯಾಗಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಕಂದಕಕ್ಕೆ ಉರುಳಿದ ಬಸ್ – 8 ಮಂದಿ ದುರ್ಮರಣ
ಶೀತಲ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮನಿಷ್ ಹಾಗೂ ಶೀಥಲ್ ದಂಪತಿಗೆ ಹೆಣ್ಣು ಮಗುವಿದೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು
Web Stories