ಮೆಲ್ಬರ್ನ್: ಬೌಲರ್ ಎಸೆದ ಬಾಲ್ ಹಿಂದೆ ಸ್ಟ್ರೈಕ್‍ನಲ್ಲಿದ್ದ ಬ್ಯಾಟ್ಸ್‌ಮನ್ ರಿಕ್ಕಿ ಪಾಂಟಿಂಗ್ ಓಡಿದ ಪ್ರಸಂಗವೊಂದು ಇಂದು ಬುಷ್‍ಫೈರ್ ಪಂದ್ಯದಲ್ಲಿ ನಡೆದಿದೆ.
ಮೆಲ್ಬರ್ನ್ ನ ಜಂಕ್ಷನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಬುಷ್‍ಫೈರ್ ಪಂದ್ಯದ ಪಾಂಟಿಂಗ್ ಇಲೆವೆನ್ ತಂಡದ ಇನ್ನಿಂಗ್ಸ್ ನಲ್ಲಿ ಗ್ರಿಲ್‍ಕ್ರಿಸ್ಟ್ ತಂಡದ ಬೌಲರ್, ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಕರ್ಟ್ನಿ ವಾಲ್ಷ್ ಎರಡನೇ ಓವರ್ ಬೌಲಿಂಗ್ ಮಾಡಿದರು. ಎಡರನೇ ಎಸೆತದಲ್ಲಿ ಜಸ್ಟಿನ್ ಲ್ಯಾಂಗರ್ ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಲ್ಯಾಂಗರ್ 3 ಎಸೆತಗಳಲ್ಲಿ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
Advertisement
Ricky Ponting wanted a piece of Courtney Walsh's moon-ball! #BigAppeal pic.twitter.com/Wze1ZvK1nP
— cricket.com.au (@cricketcomau) February 9, 2020
Advertisement
ಲ್ಯಾಂಗರ್ ಬಳಿಕ ಮೈದಾನಕ್ಕಿಳಿಸಿ ರಿಕ್ಕಿ ಪಾಂಟಿಂಗ್ ಕರ್ಟ್ನಿ ವಾಲ್ಷ್ ಎಸೆತವನ್ನು ಎದುರಿಸಲು ಸಜ್ಜಾಗಿದ್ದರು. ಆದರೆ ಕರ್ಟ್ನಿ ವಾಲ್ಷ್ ಅವರು ಬಿಗ್ ವೈಡ್ ಎಸೆಯುತ್ತಿದ್ದಂತೆ ಸ್ಟ್ರೈಕ್‍ನಲ್ಲಿದ್ದ ರಿಕ್ಕಿ ಪಾಂಟಿಂಗ್ ಬಾಲ್ ತರಲು ಸ್ಕ್ರೀಜ್ ಬಿಟ್ಟು ಓಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಈ ಪಂದ್ಯದಲ್ಲಿ ಪಾಂಟಿಂಗ್ ನಾಯಕತ್ವದ ತಂಡ ಬ್ರಿಯಾನ್ ಲಾರಾ 30 ರನ್ (11 ಎಸೆತ), ರಿಕ್ಕಿ ಪಾಂಟಿಂಗ್ 26 ರನ್ (14 ಎಸೆತ), ಮ್ಯಾಥ್ಯೂ ಹೇಡನ್ 16 ರನ್ (14 ಎಸೆತ), ಲ್ಯೂಕ್ ಹಾಡ್ಜ್ ಔಟಾಗದೆ 11 ರನ್ (4 ಎಸೆತ) ಸೇರಿ ನಿಗದಿತ 10 ಓವರಿಗೆ 5 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತು. ಇದೇ ಸಮಯದಲ್ಲಿ ಗಿಲ್‍ಕ್ರಿಸ್ಟ್ ತಂಡದ ಯುವರಾಜ್ ಸಿಂಗ್, ಆ್ಯಡ್ರ್ಯೂ ಸೈಮಂಡ್ಸ್ ಹಾಗೂ ಕಟ್ರ್ನಿ ವಾಲ್ಷ್ ತಲಾ ಒಂದು ವಿಕೆಟ್ ಪಡೆದರು. ಪಾಂಟಿಂಗ್ ತಂಡ ನೀಡಿದ್ದ 105 ರನ್‍ಗಳ ಗುರಿ ಬೆನ್ನಟ್ಟಿದ ಗಿಲ್‍ಕ್ರಿಸ್ಟ್ ತಂಡವು ಒಂದು ರನ್‍ನಿಂದ ಸೋಲು ಒಪ್ಪಿಕೊಂಡಿತು.
Advertisement
"He's still giving me nightmares" – some gold from Justin Langer, who resumed rivalries with the great Courtney Walsh today at the Bushfire Appeal… and lost! pic.twitter.com/cytyZYk648
— cricket.com.au (@cricketcomau) February 9, 2020
ತಂಡ ಹೀಗಿತ್ತು:
ಪಾಂಟಿಂಗ್ ಟೀಂ:
ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್, ರಿಕಿ ಪಾಂಟಿಂಗ್ (ಸಿ), ಎಲಿಸ್ ವಿಲ್ಲಾನಿ, ಬ್ರಿಯಾನ್ ಲಾರಾ, ಲಿಚ್‍ಫೀಲ್ಡ್, ಬ್ರಾಡ್ ಹ್ಯಾಡಿನ್ (ವಿಕೆ), ಬ್ರೆಟ್ ಲೀ, ವಾಸಿಮ್ ಅಕ್ರಮ್, ಡಾನ್ ಕ್ರಿಶ್ಚಿಯನ್, ಲ್ಯೂಕ್ ಹಾಡ್ಜ್. ಕೋಚ್: ಸಚಿನ್ ತೆಂಡೂಲ್ಕರ್.
ಗಿಲ್‍ಕ್ರಿಸ್ಟ್ ಟೀಂ:
ಆ್ಯಡಮ್ ಗಿಲ್‍ಕ್ರಿಸ್ಟ್ (ಸಿ & ವಿಕೆ), ಶೇನ್ ವ್ಯಾಟ್ಸನ್, ಬ್ರಾಡ್ ಹಾಡ್ಜ್, ಯುವರಾಜ್ ಸಿಂಗ್, ಅಲೆಕ್ಸ್ ಬ್ಲ್ಯಾಕ್‍ವೆಲ್, ಆಂಡ್ರ್ಯೂ ಸೈಮಂಡ್ಸ್, ಕಟ್ರ್ನಿ ವಾಲ್ಷ್, ನಿಕ್ ರಿಯೊವಾಲ್ಡ್, ಪೀಟರ್ ಸಿಡಲ್, ಫವಾದ್ ಅಹ್ಮದ್ . ಕೋಚ್: ಟಿಮ್ ಪೈನೆ.