ಯಾದಗಿರಿ: ಹೈದರಾಬಾದಿನಲ್ಲಿ ಟೆಕ್ಕಿಯೊಬ್ಬರಿಗೆ ಕೊರೊನ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆ ಯಾದಗಿರಿಯಿಂದ ಹೈದರಾಬಾದ್‍ಗೆ ತೆರಳುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.
ಹೈದರಾಬಾದ್‍ನಿಂದ ಜಿಲ್ಲೆಗೆ ಬಂದು ವಾಪಸ್ ತೆರಳುತ್ತಿರುವ ತೆಲಂಗಾಣ ಬಸ್‍ಗಳು ಖಾಲಿ ಖಾಲಿಯಾಗಿವೆ. ಇನ್ನೂ ಕೆಲವು ಪ್ರಯಾಣಿಕರು ಮತ್ತು ಬಸ್ ಚಾಲಕ, ನಿರ್ವಾಹಕರು ಮುಖಕ್ಕೆ ಮಾಸ್ಕ್ ಧರಿಸಿ ಹೈದರಾಬಾದ್ ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
Advertisement
Advertisement
ತೆಲಂಗಾಣದಿಂದ ರಾಜ್ಯಕ್ಕೆ ಬರುವ ಬಸ್‍ಗಳನ್ನು ಅಲ್ಲಿನ ಆರೋಗ್ಯ ಇಲಾಖೆ ತಪಾಸಣೆ ಮಾಡುತ್ತಿದೆ. ಆದರೆ ಅಲ್ಲಿಂದ ರಾಜ್ಯ ತಲುಪುವ ಬಸ್ ತಪಾಸಣೆ ನಮ್ಮ ರಾಜ್ಯದ ಆರೋಗ್ಯ ಇಲಾಖೆಯಿಂದ ಮಾಡದಿರುವುದು ಪ್ರಯಾಣಿಕ ಮತ್ತು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಆಂಧ್ರ, ತೆಲಂಗಾಣ, ಕೇರಳ ಗಡಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಬಳ್ಳಾರಿ, ಕಲಬುರುಗಿ, ಬೆಳಗಾವಿ, ಚಾಮರಾಜನಗರ, ರಾಯಚೂರು ಭಾಗಗಳಲ್ಲಿ ಕೂಡ ಎಚ್ಚರಿಕೆ ವಹಿಸಲಾಗುತ್ತಿದೆ.