ಬೆಳಗಾವಿ: ಕಾಂಗ್ರೆಸ್ ಮಹಿಳಾ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಾಸಕ ಸತೀಶ್ ಜಾರಕಿಹೊಳಿ ನಡುವೆ ಬಸ್ ಯುದ್ಧ ಆರಂಭವಾಗಿದ್ದು, ಇದರಿಂದ ಇಬ್ಬರು ಜಿದ್ದಿಗೆ ಬಿದ್ದಿದ್ದಾರೆ ಎಂದು ಮಾತು ಕೇಳಿ ಬಂದಿದೆ.
ಶಾಸಕಿ ಲಕ್ಷ್ಮಿ ಕಳೆದ ಒಂದು ವಾರದ ಹಿಂದೆ ಬೆಳಗಾವಿಯ ಸುವರ್ಣ ಸೌಧದ ಎದುರು ತನ್ನ ಗ್ರಾಮೀಣ ಕ್ಷೇತ್ರಗಳಿಗೆ ಓಡಾಡಲು 10 ಬಸ್ಸುಗಳ ಸೇವೆಗೆ ಚಾಲನೆ ನೀಡಿದ್ದರು. ಇದಾದ ಬೆನ್ನಲ್ಲೇ ಎರಡು ದಿನಗಳ ಹಿಂದೆ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಕೂಡಾ ಬೆಳಗಾವಿಯ ಸಿಟಿ ಬಸ್ ನಿಲ್ದಾಣದಲ್ಲಿ ತಮ್ಮ ಕ್ಷೇತ್ರಕ್ಕೆ 10 ಬಸ್ಸುಗಳ ಸೇವೆಗೆ ಚಾಲನೆ ನೀಡಿದ್ದಾರೆ.
Advertisement
Advertisement
ಶಾಸಕಿ ಲಕ್ಷ್ಮಿ ಹತ್ತು ಬಸ್ಸುಗಳಿಗೆ ಚಾಲನೆ ನೀಡಿದರೆ, ಜಾರಕಿಹೊಳಿ ಸಹ 10 ಬಸ್ಸುಗಳ ಸೇವೆಯನ್ನು ದಿಢೀರ್ ಆರಂಭಿಸಿದ್ದು, ಈಗ ಚರ್ಚೆ ಆರಂಭವಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಯ ಕಾಮಗಾರಿ ಹೆಸರಿನಲ್ಲಿ ಇಬ್ಬರ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.
Advertisement
ಇತ್ತ ಬೆಳಗಾವಿಯ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದ್ದ ಸತೀಶ್ ಜಾರಕಿಹೊಳಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಾಲ್ಗೊಂಡಿದ್ದರು. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಸಮಾರಂಭಕ್ಕೆ ಡಿಸಿ ಹೋಗಿರಲೇ ಇಲ್ಲ. ಆದರೆ ಈ ಬಗ್ಗೆ ಸ್ವತಃ ಡಿಸಿ ಅವರೇ ಸ್ಪಷ್ಟನೆ ನೀಡಬೇಕಿದೆ.
Advertisement
ನಮ್ಮ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಓಡಾಡಲು ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಹೆಚ್ಚಿನ ಬಸ್ ಸೌಲಭ್ಯವನ್ನು ಒದಗಿಬೇಕು ಎಂದು ಇಬ್ಬರು ನಾಯಕರು ಕೇಳಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ಪ್ರಭಾವಿ ನಾಯಕರಾದ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಯಾರ ಬೇಡಿಕೆ ಈಡೇರಿಸಬೇಕು ಎನ್ನುವ ಗೊಂದಲಕ್ಕೆ ಈಡಾಗಿ ಕೊನೆಗೆ ಇಬ್ಬರ ಕ್ಷೇತ್ರಗಳಿಗೆ 10 ಬಸ್ಸುಗಳ ಸೇವೆಯನ್ನು ಆರಂಭಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv