ತುಮಕೂರು: ಬಸ್ (Bus) ಹತ್ತಲು ಹೋದ ವೇಳೆ ವಿದ್ಯಾರ್ಥಿನಿ (Student) ಕಾಲಿನ ಮೇಲೆ ಬಸ್ ಟೈರ್ (Bus Tyre) ಹರಿದು ಕಾಲು ಮುರಿದಿರುವ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ (Tumakuru Bustand) ನಡೆದಿದೆ.
ಹರ್ಷಿತ (17) ಕಾಲು ಮುರಿತಕ್ಕೊಳಗಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ. ಬಸ್ ತುಮಕೂರಿನಿಂದ ಮಧುಗಿರಿಗೆ ಹೊರಟಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ನೂಕಾಟ ತಳ್ಳಾಟ ಉಂಟಾಗಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಮಾ.28ರೊಳಗೆ ಕಚೇರಿ ಖಾಲಿ ಮಾಡುವಂತೆ ಕಾಂಗ್ರೆಸ್‌ಗೆ ನೋಟಿಸ್
ವಿದ್ಯಾರ್ಥಿನಿ ಕಾಲಿನ ಮೇಲೆ ಹತ್ತಿದ ಬಸ್ ಟೈರ್ ಹತ್ತಿದ ಪರಿಣಾಮ ಕಾಲು ಮುರಿದಿದೆ. ಸದು ಅಂಬುಲೆನ್ಸ್ ಮೂಲಕ ಹರ್ಷಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹರ್ಷಿತ ತುಮಕೂರಿನ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಾಳೆ. ಇದನ್ನೂ ಓದಿ: ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಕೇಂದ್ರ ತಯಾರಿ – ಕರ್ನಾಟಕದ 28 ಕ್ಷೇತ್ರಗಳು 42 ಆಗುತ್ತಾ?

