– ಖಾಸಗಿ ಬಸ್ ಟಿಕೆಟ್ ದರದಲ್ಲಿ 50% ಏರಿಕೆ
ಬೆಂಗಳೂರು: ಶನಿವಾರದಿಂದ ಸಾಲು ಸಾಲು ರಜೆಗಳು ಆರಂಭವಾಗ್ತಿವೆ. ನಾಲ್ಕು ದಿನದ ರಜೆ ಕಳೆಯಲು, ಊರಿಗೆ ಹೋಗೋ ಪ್ಲಾನ್ ಮಾಡಿದ್ರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.
ಹೌದು, ಆಗಸ್ಟ್ 15ರ ಹಿನ್ನೆಲೆ ನಾಲ್ಕು ದಿನ ಸಾಲು ಸಾಲು ರಜೆಗಳು ಬರುತ್ತಿವೆ. ಶನಿವಾರ, ಭಾನುವಾರ, ಮಂಗಳವಾರ ಆಗಸ್ಟ್ 15ರ ರಜೆ, ಸೋಮವಾರ ಸೇರಿ ನಾಲ್ಕು ದಿನ ರಜೆ ಸಿಗಲಿದೆ. ಹೀಗಾಗಿ ಬೆಂಗಳೂರಿನ (Bengaluru) ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಕೆಎಸ್‍ಆರ್ ಟಿಸಿ ಬಸ್‍ಗಳಲ್ಲಿ ಶಕ್ತಿ ಯೋಜನೆಯಿಂದ ಬಸ್‍ಗಳು ರಶ್ ಆಗ್ತಿವೆ. ಹೀಗಾಗಿ ಜನ ಖಾಸಗಿ ಬಸ್‍ಗಳತ್ತ (Private Bus) ಮುಖ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಹೆಚ್ಚಿಸಿದ್ದಾರೆ. ಇಂದು ರಾತ್ರಿ ಹಾಗೂ ಶನಿವಾರ ರಾತ್ರಿ ಹೊರಡುವ ಖಾಸಗಿ ಬಸ್‍ಗಳ ದರವನ್ನು ದುಪ್ಪಟ್ಟು ಮಾಡಿದೆ. ಟಿಕೆಟ್ ದರ ಒನ್ ಟು ಡಬ್ಬಲ್ ಮಾಡಿದ್ದಕ್ಕೆ ಪ್ರಯಾಣಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಹೆಚ್ಚು ಹೆಚ್ಚು ಬಸ್ ಟಿಕೆಟ್ ಬುಕ್ಕಿಂಗ್ ಆಗ್ತಿದ್ದಂತೆ ಏಕಾಏಕಿ ಟಿಕೆಟ್ ದರವನ್ನು ಖಾಸಗಿ ಬಸ್ ಮಾಲೀಕರು ಏರಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಆಪ್‍ನಲ್ಲಿ ಒನ್ ಟು ಡಬಲ್ ರೇಟ್ ತೋರಿಸುತ್ತಿವೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಹೊರಗೆ ನಡೆದುಕೊಂಡು ಹೋಗ್ತಿದ್ದ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ
Advertisement
ಇಂದು ರಾತ್ರಿಯ ಬಸ್ ಟಿಕೆಟ್ ದರ ಎಷ್ಟಿದೆ?
* ಬೆಂಗಳೂರು TO ಶಿವಮೊಗ್ಗ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 450 ರೂ. ನಿಂದ 550 ರೂ. – ಇಂದಿನ ಟಿಕೆಟ್ ದರ 1,200 ರೂ.
* ಬೆಂಗಳೂರು TO ಹುಬ್ಬಳ್ಳಿ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 700 ರೂ. -900 ರೂ.- ಇಂದಿನ ಟಿಕೆಟ್ ದರ 1,600 ರೂ.
* ಬೆಂಗಳೂರು TO ಮಂಗಳೂರು: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 850 ರೂ. – 900 ರೂ. – ಇಂದಿನ ಟಿಕೆಟ್ ದರ 1,400 ರೂ. – 2,100 ರೂ.
* ಬೆಂಗಳೂರು TO ಉಡುಪಿ (ಎಸಿ ಬಸ್): ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 1000 ರೂ. – 1200 ರೂ.- ಇಂದಿನ ಟಿಕೆಟ್ ದರ 2100 ರೂ. – 3500 ರೂ.
Advertisement
* ಬೆಂಗಳೂರು TO ಧಾರವಾಡ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 800 ರೂ. – 1000 ರೂ. – ಇಂದಿನ ಟಿಕೆಟ್ ದರ 1,300 ರೂ. – 1,600 ರೂ.
* ಬೆಂಗಳೂರು TO ಬೆಳಗಾವಿ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 750 ರೂ. – 1100 ರೂ. – ಇಂದಿನ ಟಿಕೆಟ್ ದರ 1,200 ರೂ. – 1,900 ರೂ.
* ಬೆಂಗಳೂರು TO ದಾವಣಗೆರೆ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 500 ರೂ. – 700 ರೂ. – ಇಂದಿನ ಟಿಕೆಟ್ ದರ 750 ರೂ. – 1200 ರೂ.
* ಬೆಂಗಳೂರು TO ಚಿಕ್ಕಮಗಳೂರು: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 650 ರೂ. – 800 ರೂ.- ಇಂದಿನ ಟಿಕೆಟ್ ದರ 1500 ರೂ.
* ಬೆಂಗಳೂರು TO ಹಾಸನ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 750 ರೂ. – 950 ರೂ.- ಇಂದಿನ ಟಿಕೆಟ್ ದರ 1,300 ರೂ. – 1,800 ರೂ.
ಒಟ್ಟಿನಲ್ಲಿ ಈ ಖಾಸಗಿ ಬಸ್‍ಗಳ ಹಗಲು ದರೋಡೆಗೆ ಪ್ರಯಾಣಿಕರು ರೋಸಿಹೋಗಿದ್ದು, ಊರುಗಳಿಗೆ ಹೋಗುವ ಪ್ಲಾನ್ ಕ್ಯಾನ್ಸಲ್ ಮಾಡಿಕೊಳ್ಳಬೇಕಾ ಅಥವಾ ದುಪ್ಪಟ್ಟು ಹಣ ಕೊಟ್ಟು ಹೋಗಬೇಕಾ ಅನ್ನೋ ಗೊಂದಲದಲ್ಲಿದ್ದಾರೆ.
Web Stories