ಬೆಳಗಾವಿ: ಕಳೆದ ಎರಡು ದಿನಗಳಿಂದ ಬಂದ್ ಆಗಿದ್ದ ಬೆಳಗಾವಿ-ಮಹಾರಾಷ್ಟ್ರ (Belagavi – Maharashtra) ನಡುವೆ ಬಸ್ (Bus) ಸಂಚಾರ ಪುನರಾರಂಭಗೊಂಡಿದೆ.
Advertisement
ಎಂದಿನಂತೆ ಬಸ್‌ಗಳು ಓಡಾಡುತ್ತಿದ್ದು, ಕೊಲ್ಲಾಪುರಕ್ಕೆ ತೆರಳುವ ಬಸ್‌ಗಳು ನಗರದ ಹೊರವಲಯಗಳವರೆಗೆ ಮಾತ್ರ ಸಂಚಾರ ಮಾಡಲಿದ್ದು ಕೊಲ್ಲಾಪುರ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ (National Highway) ಮೇಲೆ ಪ್ರಯಾಣಿಕರ ಇಳಿಸಿ ವಾಪಸ್ ಕರ್ನಾಟಕಕ್ಕೆ ಬರಲಿವೆ. ಬೆಳಗಾವಿ (Belagavi) ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ನಿತ್ಯ 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಮಾಡುತ್ತಿದ್ದು ಅದರಲ್ಲಿ ಪ್ರಮುಖವಾಗಿ ಬೆಳಗಾವಿ, ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ ವಿಭಾಗಗಳಿಂದ ಸಂಚರಿಸುತ್ತವೆ. ಇದನ್ನೂ ಓದಿ: ಪಿಜಿ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಟಾರ್ಚರ್ – ಸೆಕ್ಸ್ ಆಫರ್ ಕೊಟ್ಟು ಖೆಡ್ಡಾಕ್ಕೆ ಬೀಳಿಸಿದ ಖಾಕಿ
Advertisement
Advertisement
ಕರ್ನಾಟಕ ಬಸ್‌ಗಳಿಗೆ (Karnataka Bus) ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದ ಮರಾಠಿ ಪುಂಡರು ಮತ್ತು ಶಿವಸೇನೆ, ಎಂಇಎಸ್, ಸ್ವರಾಜ್ಯ ಸಂಘಟನೆ ಸೇರಿ ವಿವಿಧ ಸಂಘಟನೆಗಳ ಪುಂಡಾಟಿಕೆ ಹಿನ್ನೆಲೆ ಎರಡು ದಿನಗಳಿಂದ ಮಹಾರಾಷ್ಟ್ರಕ್ಕೆ (Maharashtra) ತೆರಳುವ ಬಸ್‌ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಎರಡು ದಿನಗಳ ಬಳಿಕ ಇಂದಿನಿಂದ ಮತ್ತೆ ಬಸ್‌ಗಳ ಸಂಚಾರ ಪುನಾರಂಭ ಮಾಡಲಾಗಿದ್ದು ಪರಿಸ್ಥಿತಿ ಅವಲೋಕಿಸಿ ಹಂತ-ಹಂತವಾಗಿ ಬಸ್‌ಗಳ ಸಂಚಾರ ಆರಂಭ ಮಾಡಲಾಗುತ್ತದೆ. ಇದನ್ನೂ ಓದಿ: ಬುರ್ಕಾ ಧರಿಸಿ ಐಟಂ ಸಾಂಗ್‌ಗೆ ಸ್ಟೆಪ್ – ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳು ಅಮಾನತು
Advertisement
ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಸಂಚಾರ ಆರಂಭಿಸಿದರೂ ಎಂಎಸ್‌ಆರ್‌ಟಿಸಿ (MSRTC) ಮಹಾರಾಷ್ಟ್ರ ಸಾರಿಗೆ ಇಲಾಖೆ ಬಸ್ ಗಳನ್ನು ಪ್ರಾರಂಭಿಸಿಲ್ಲ.