ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆಯಾಗಿದೆ. ಶೇ.12 ರಷ್ಟು ದರವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಪ್ರಕಟಿಸಿದೆ.
ಬಸ್ ಪ್ರಯಾಣ ದರ ಪರಿಷ್ಕರಿಸುವ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಶೇ.12 ರಷ್ಟು ಪ್ರಯಾಣ ದರವನ್ನು ಏರಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಸಾರಿಗೆ ಇಲಾಖೆಯ ಆಧೀನ ಕಾರ್ಯದರ್ಶಿ ಸತ್ಯವತಿ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
Advertisement
Advertisement
ಲೋಕಸಭಾ ಚುನಾವಣೆಯ ನಂತರ ಪ್ರಯಾಣ ದರ ಏರಿಕೆ ಮಾಡಲು ಸಮ್ಮಿಶ್ರ ಸರ್ಕಾರ ಮುಂದಾಗಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಸರ್ಕಾರವೇ ಪತನ ಹೊಂದಿದ ಪರಿಣಾಮ ಅಧಿಕರಕ್ಕೆ ಏರಿದ ಬಿಜೆಪಿ ಸರ್ಕಾರ ಕೂಡಲೇ ದರ ಏರಿಸಿರಲಿಲ್ಲ. ಈಗ ಉಪ ಚುನಾವಣೆ ನಡೆದ ನಂತರ ದರವನ್ನು ಸರ್ಕಾರ ಏರಿಕೆ ಮಾಡಲು ಒಪ್ಪಿಗೆ ನೀಡಿದೆ.
Advertisement
ಎಷ್ಟು ಏರಿಕೆ ಆಗುತ್ತದೆ?
ಈಗ 100 ರೂಪಾಯಿ ಟಿಕೆಟ್ ದರ 12 ರೂ. ಏರಿಕೆ ಆಗಿದ್ದರೆ 300 ರೂ. ಟಿಕೆಟ್ ದರ ಇದ್ದರೆ ಇನ್ನು ಮುಂದೆ ನೀವು 36 ರೂ. ಹೆಚ್ಚು ನೀಡಿ ಒಟ್ಟು 336 ರೂ. ನೀಡಬೇಕಾಗುತ್ತದೆ. 500 ರೂ. ಟಿಕೆಟ್ ದರ ಇದ್ದರೆ ನೀವು 60 ರೂ. ಹೆಚ್ಚಿಗೆ ನೀಡಬೇಕಾಗುತ್ತದೆ. 1000 ರೂ. ಟಿಕೆಟಿಗೆ ಇನ್ನು ಮುಂದೆ ಒಟ್ಟು 1120 ರೂ. ನೀಡಬೇಕಾಗುತ್ತದೆ.