ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಆಗಿರುವುದಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅಲ್ಲಿನ ಜನತೆಗೆ ಮತದಾನದ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದನ್ನು ಸಾರಿ ಹೇಳುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು. ಜಯರಾಜ್ ಎಂಬ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಜಯರಾಜ್ ಶೆಟ್ಟಿ ಡ್ರೈವಿಂಗ್ ಮಾಡುತ್ತಿದ್ದರು. ಈ ವೇಳೆ ಅವರು ತಮ್ಮ ಬೂತ್ ಹತ್ತಿರ ಬಂದಾಗ ಬಸ್ ನಿಲ್ಲಿಸಿ, ಓಡಿಕೊಂಡು ಹೋಗಿ ಮತ ಹಾಕಿ ಬಂದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
Advertisement
Advertisement
ವಿಡಿಯೋದಲ್ಲೇನಿದೆ?:
ಮಂಗಳೂರು – ಶಿವಮೊಗ್ಗ ನಡುವೆ ಸಂಚರಿಸುವ ಖಾಸಗಿ ಬಸ್ ರಸ್ತೆ ಬದಿಯಲ್ಲಿರುವ ಶಾಲೆಯೊಂದರ ಮುಂದೆ ನಿಲ್ಲುತ್ತದೆ. ಕೂಡಲೇ ಚಾಲಕ ಬಸ್ಸಿನಿಂದ ಇಳಿದು ಮತಗಟ್ಟೆಯ ಬಳಿ ವೇಗವಾಗಿ ಓಡುತ್ತಾರೆ. ಅಲ್ಲದೆ ತನ್ನ ಹಕ್ಕು ಚಲಾಯಿಸಿ ಅಷ್ಟೇ ವೇಗವಾಗಿ ವಾಪಸ್ ಬಂದಿದ್ದಾರೆ. ಇದನ್ನೂ ಓದಿ: ವೋಟ್ ಹಾಕದೇ ಟ್ರಿಪ್ ಬಂದೋರ್ಗೆ ಮಾಡಿದ್ರು ವ್ಯಂಗ್ಯ ಸನ್ಮಾನ!
Advertisement
ಆ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಕಡಿಮೆ ಕೂಡ ಇತ್ತು. ಹೀಗಾಗಿ ಚಾಲಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ತನ್ನ ಮತವನ್ನು ಸದೃಢ ಭಾರತದ ನಿರ್ಮಾಣಕ್ಕೆ ಚಲಾಯಿಸಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ನಂತರ ಫೆಸ್‍ಬುಕ್ ಹಾಗೂ ವಾಟ್ಸಾಪ್ ಮೂಲಕ ಹರಿಯಬಿಟ್ಟಿದ್ದಾರೆ.
Advertisement
ಒಟ್ಟಿನಲ್ಲಿ ಕರ್ತವ್ಯದ ಮಧ್ಯೆಯೇ ಬಸ್ ನಿಲ್ಲಿಸಿ, ಮತದಾನದ ಹಕ್ಕು ಚಲಾಯಿಸಿದ್ದು ಇದೀಗ ಪ್ರಶಂಸೆಗೆ ಕಾರಣವಾಗಿದೆ. ಕೆಲಸಕ್ಕೆ ರಜೆ ಕೊಟ್ಟರೂ, ಮತ ಹಾಕದೇ ಮಜಾ ಮಾಡುವ ಮಂದಿಯ ನಡುವೆ ಈ ಬಸ್ ಚಾಲಕನ ಕರ್ತವ್ಯ ನಿಷ್ಠೆ ಗಮನ ಸೆಳೆದಿದೆ.