ಕಾರವಾರ: ಚಲಿಸುತ್ತಿದ್ದ ಖಾಸಗಿ ಬಸ್ಸಿಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಜೋಡಕೆರೆ ಬಳಿ ಇಂದು ಮುಂಜಾನೆ ನಡೆದಿದೆ.
ಮುಂಬೈನಿಂದ ಮಂಗಳೂರು ಕಡೆ ರಾಷ್ಟೀಯ ಹೆದ್ದಾರಿ 63ರ ಮೂಲಕ ಬಸ್ ಸಂಚರಿಸುತಿದ್ದು, 22 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ತಗಲಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- Advertisement
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಜರಾಗಿ ಬೆಂಕಿ ನಂದಿಸಿದ್ದು ಘಟನೆ ಯಲ್ಲಾಪುರ ಠಾಣಾ ಪ್ಯಾಪ್ತಿಯಲ್ಲಿ ನಡೆದಿದ್ದು 20 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನೇ ಕಿಡ್ನಾಪ್‍ಗೈದ್ರು