ಕಲಬುರಗಿ: ಬುರ್ಖಾ (Burqa) ಧರಿಸದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರನ್ನ ಬಸ್ ಹತ್ತಲು ಬಿಡದ ಬಸ್ ಚಾಲಕನನ್ನ (Bus Diver) ಅಮಾನತುಗೊಳಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಹಿಜಬ್‌ಧಾರಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಬಸ್ ಚಾಲಕನನ್ನ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಉಡುಪಿ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಕೇಸ್ – ಬೆಂಗ್ಳೂರು FSLಗೆ ಮೊಬೈಲ್ ರವಾನೆ
Advertisement
Advertisement
ಕಲಬುರಗಿ ಬಸ್ ಡಿಪೋ-3ರ ಚಾಲಕ ಮೆಹಬೂಬ್ ಪಟೇಲ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೇ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ KKRTC ಕಲಬುರಗಿ ವಿಭಾಗದ ಡಿಸಿ ಚಾಲಕನನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
Advertisement
ಅಷ್ಟಕ್ಕೂ ನಡೆದಿದ್ದೇನು?
ಎರಡು ದಿನಗಳ ಹಿಂದೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಬಳಿ ಹಿಜಬ್‌ಧಾರಿ ವಿದ್ಯಾರ್ಥಿನಿಯರು ತಮ್ಮೂರಿಗೆ ಹೊರಟಿದ್ದರು. ಈ ವೇಳೆ ಚಾಲಕ ನೀನು ಮುಸ್ಲಿಂ ಇದಿಯಲ್ವ.. ಬುರ್ಖಾ ಧರಿಸಿ ಬಾ.. ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ ಎಂದು ಹೇಳಿದ್ದ. ಆಗ ಶಿಕ್ಷಕರು ಮತ್ತು ಬಸ್ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದನ್ನೂ ಓದಿ: ನೀನು ಮುಸ್ಲಿಂ ಇದಿಯಲ್ವ.. ಬುರ್ಖಾ ಧರಿಸಿ ಬಾ – ವಿದ್ಯಾರ್ಥಿನಿಯರಿಗೆ ಬಸ್ ಹತ್ತಲು ಚಾಲಕ ನಿರಾಕರಣೆ
Advertisement
ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಸ್ ಚಾಲಕನನ್ನ ಅಮಾನತುಗೊಳಿಸಿರುವುದಾಗಿ ಕೆಕೆಆರ್‌ಟಿಸಿ ದೃಢಪಡಿಸಿದೆ.
Web Stories